Connect with us

    FILM

    ಎರಡು ರಾಷ್ಟ್ರಪ್ರಶಸ್ತಿ ಸಿಕ್ಕಿದೆ ಆದರೆ ಮೀನು ಸಿಕ್ಕಿಲ್ಲ – ಊರಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್ ಶೆಟ್ಟಿ

    ಕುಂದಾಪುರ ಅಗಸ್ಟ್ 24 : ಇತ್ತೀಚೆಗಷ್ಟೇ ರಾಷ್ಟ್ರಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿಯವರ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂತಾರ ಚಾಪ್ಟರ್ 1’ರ ಸಿನಿಮಾದಲ್ಲಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕುಂದಾಪುರದಲ್ಲಿ ನಟ ರಿಷಬ್ ಶೆಟ್ಟಿ ಮೀನಿಗೆ ಗಾಳ ಹಾಕುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


    ‘ಕಾಂತಾರ ಚಾಪ್ಟರ್ 1’ಕ್ಕಾಗಿ ಇಡೀ ಚಿತ್ರತಂಡ ಕುಂದಾಪುರದಲ್ಲಿಯೇ ಬೀಡು ಬಿಟ್ಟಿದೆ. ಬಿಡುವಿನ ಸಮಯದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ‌ ತಮ್ಮ ತಂಡದ ಜೊತೆ ಸೇರಿಕೊಂಡು ಕಾಡು ಮೇಡು ಅಲೆದುಕೊಂಡು ಮೀನಿಗೆ ಗಾಳ ಹಾಕುವ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ.

    ಇನ್ನೂ ರಾತ್ರಿ ಹೊತ್ತು ರಿಷಬ್ ಮೀನಿಗೆ ಗಾಳ ಹಾಕುತ್ತಿರುವ ವಿಶೇಷ ಫೋಟೋವೊಂದನ್ನು ಡಿಓಪಿ ಅರವಿಂದ್ ಕಶ್ಯಪ್ ಹಂಚಿಕೊಂಡು, ಇವರಿಗೆ ಮೀನು ಸಿಗ್ಲಿಲ್ಲ. ಆದರೆ ಎರಡು ರಾಷ್ಟ್ರ ಪ್ರಶಸ್ತಿ ಬುಟ್ಟಿಗೆ ಬಿತ್ತು ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ. ರಿಷಬ್ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply