Connect with us

KARNATAKA

ರಾಜ್ಯದಲ್ಲಿ ಝೀಕಾ ವೈರಸ್​ಗೆ (Zika virus) ಮೊದಲ ಬಲಿ,ಶಿವಮೊಗ್ಗದಲ್ಲಿ ವೃದ್ದ ಸಾವು..!

ಶಿವಮೊಗ್ಗ: ಕರ್ನಾಟಕದಲ್ಲಿ ಝೀಕಾ ವೈರಸ್​ಗೆ (Zika virus) ಮೊದಲ ಬಲಿಯಾಗಿದ್ದು ಶಿವಮೊಗ್ಗದಲ್ಲಿ 73 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

ಝೀಕಾ ವೈರಸ್ ಲಕ್ಷಣಗಳಿದ್ದ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋಮಾರ್ಬಿಟಿಸ್ ಇದ್ದು, ಜೊತೆಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು. ಈ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗುಣಮುಖರಾಗಿದ್ದಾರೆ. ಬಾಣಂತಿ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಜಿಗಣಿಯಲ್ಲಿ ಝೀಕಾ ಸೋಂಕಿತೆಗೆ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯವಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಝೀಕಾ ವೈರಸ್ ಭೀತಿ ಎದುರಾಗಿದ್ದು, ಇದುವರೆಗೆ 9 ಝೀಕಾ ವೈರಸ್ ಕೇಸ್ ಪತ್ತೆ ಆಗಿವೆ. ಬೆಂಗಳೂರಿನ ಜಿಗಣಿ ಪ್ರದೇಶದಲ್ಲಿ 6, ಶಿವಮೊಗ್ಗ ಜಿಲ್ಲೆಯಲ್ಲಿ 3, ಝೀಕಾ ವೈರಸ್ ಕೇಸ್ ಪತ್ತೆ ಆಗಿವೆ. ಈ ಬಗ್ಗೆ ಝೀಕಾ ವೈರಸ್ ಸೋಂಕಿತರ ವಿವರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಝೀಕಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆ, ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ 3ಕಿ.ಮೀ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ಝೋನ್ ಘೋಷಣೆ ಮಾಡಿದೆ. ಝೀಕಾ ಸೋಂಕು ಸೊಳ್ಳೆಗಳಿಂದ ಹರಡಲಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕ್ರಮ ವಹಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *