DAKSHINA KANNADA
ಮಂಗಳೂರು : ಆಶ್ರಫ್ ಕ್ಯಾಂಟಿನ್ ಗೆ ಭೇಟಿ ನೀಡಿ ಚಹ ಸವಿದ ಸ್ಪೀಕರ್ ಯು.ಟಿ. ಖಾದರ್..!
ಮಂಗಳೂರು : ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ನಗರದ ರಾವ್ ಆಂಡ್ ರಾವ್ ಸರ್ಕಲಿನಲ್ಲಿರುವ ಕ್ಯಾಂಟೀನಿಗೆ ಭೇಟಿ ನೀಡಿ ಕಟ್ಟಂ ಚಹ(ಹಾಲು ಸೇರಿಸದ ಚಹ) ಸೇವಿಸಿದರು.
ಕಟ್ಟಕಡೆಯವ ಎಂದು ಕರೆಯಲಾಗುವ ಗೂಡಂಗಡಿಗಳಲ್ಲಿ ಆಹಾರ ಸೇವಿಸುವ ಸಿಂಪಲ್ ಲೈಫ್ ನ ಸ್ಪೀಕರ್ ಯು.ಟಿ.ಖಾದರ್ ಅವರು ಸೋಮವಾರ ಸಂಜೆ ಮಂಗಳೂರು ನಗರದ ಸರ್ವಿಸ್ ಬಸ್ ಸ್ಟಾಂಡ್ ಪ್ರದೇಶದ ಸಮೀಪದ ರಾವ್ ಆಂಡ್ ರಾವ್ ಸರ್ಕಲಿನಲ್ಲಿರುವ ಕ್ಯಾಂಟೀನಿಗೆ ಭೇಟಿ ನೀಡಿ ಬ್ಲ್ಯಾಕ್ ಟೀ ಜತೆ ನೀರು ದೋಸೆ ಸವಿದರು. ಆಗ ಸಮಯ ರಾತ್ರಿ ಎಂಟಾಗಿತ್ತು.
ಸ್ಪೀಕರ್ ಖಾದರ್ ಅವರು ಆ ಕ್ಯಾಂಟೀನಿಗೆ ಭೇಟಿ ನೀಡಲು ಕಾರಣವು ಇತ್ತು. ಅದು ಅವರದೇ ವಿಧಾನಸಭಾ ಕ್ಷೇತ್ರದ ಕಲ್ಕಟ್ಟ ನಿವಾಸಿ ಆಶ್ರಫ್ ಅವರು ನಡೆಸುತ್ತಿರುವ ಕ್ಯಾಂಟೀನ್ ಅದಾಗಿತ್ತು.
ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ದಿನವಿಡೀ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪುತ್ತೂರಿಗೆ ಭೇಟಿ ನೀಡಿ ಹಿಂತಿರುಗಿದ ಸ್ಪೀಕರ್ ಖಾದರ್ ಅವರು ಆಶ್ರಫ್ ಅವರ ಕ್ಯಾಂಟೀನಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಲವು ಮಂದಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಖಾದರ್ ಅವರಿಗೆ ಸಲ್ಲಿಸಿದರು.
You must be logged in to post a comment Login