LATEST NEWS
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ – ಶೇಕಡ 90.5 ರಷ್ಟು ಫಲಿತಾಂಶ
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ – ಶೇಕಡ 90.5 ರಷ್ಟು ಫಲಿತಾಂಶ
ಮಂಗಳೂರು ಮಾರ್ಚ್ 19 ; ಕಳೆದ ತಿಂಗಳು ನಡೆದ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವು ಇಂದು ಜಿಲ್ಲೆಯಾದ್ಯಂತ ಪ್ರಕಟಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 38306 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 16779 ಮಂದಿ ಹುಡುಗರು ಹಾಗೂ 17717 ಮಂದಿ ಹುಡುಗಿಯರು ಸೇರಿ ಒಟ್ಟು 34496 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುತ್ತಾರೆ.. ಇದರಲ್ಲಿ 6009 ಮಂದಿ ವಿಶಿಷ್ಟ ಶ್ರೇಣಿ, 14035 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಈ ಪೈಕಿ ಜಿಲ್ಲೆಯು 90.5 ರಷ್ಟು ಫಲಿತಾಂಶ ಪಡೆಯಲು ಸಫಲವಾಗಿದೆ.
ಕಲಾ ವಿಭಾಗದಿಂದ 4761 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 3929 ಮಂದಿ ಉತ್ತೀರ್ಣರಾಗಿ ಒಟ್ಟು 82.52% ಫಲಿತಾಂಶ ಪಡೆದರೆ, ವಾಣಿಜ್ಯ ವಿಭಾಗದ 16104 ವಿದ್ಯಾರ್ಥಿಗಳಲ್ಲಿ 14154 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ 87.89% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದ 17440 ವಿದ್ಯಾರ್ಥಿಗಳಲ್ಲಿ 16413 ಮಂದಿ ಉತ್ತೀರ್ಣರಾಗಿ 94.11% ಫಲಿತಾಂಶ ಪಡೆದಿರುತ್ತಾರೆ. ಹಾಗೂ 30 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 20 ಮಂದಿ ತೇರ್ಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಕಲಾ ವಿಭಾಗದಿಂದ ವಿವೇಕಾನಂದ ಪಿಯು ಕಾಲೇಜಿನ ರುಚಿತಾ ಹೆಗ್ಡೆ (576 ಅಂಕ) ಪ್ರಥಮ. ಸಂತ ಆಗ್ನೇಸ್ ಕಾಲೇಜಿನ ಬಿಂದು (575) ದ್ವಿತೀಯ, ಎಸ್‍ವಿಎಸ್ ಪಿಯು ಕಾಲೇಜ್ ಬಂಟ್ವಾಳದ ಲಿಖಿತಾ ಜಿ ಎನ್( 572 ಅಂಕ) ತೃತೀಯ ಸ್ಥಾನಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಎಸ್‍ವಿಎಸ್ ಪಿಯು ಕಾಲೇಜ್ ಬಂಟ್ವಾಳದ ಅಶ್ವಿನಿ ಬಿ (599 ಅಂಕ) ಪ್ರಥಮ, ಶ್ರೀ ರಾಮಕುಂಜೇಶ್ವರ ಕಾಲೇಜಿನ ಶಾರಧಿ ಕೆ ಎಸ್ (597ಅಂಕ) ದ್ವಿತೀಯ, ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜ್‍ನ ಉಝ್ರಾ ಕೈರುನ್ನೀಸಾ (596) ತೃತೀಯ ಸ್ಥಾನಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜ್‍ನ ಕಾರ್ತಿಕ್ ವಿ ಪೈ (596 ಅಂಕ), ಎಕ್ಸ್ಪರ್ಟ್ ಕಾಲೇಜಿನ ಅಥರ್ವ ಎನ್ ಪಿಕ್ಳೆ (596) ಅಂಕಗಳೊಂದಿಗೆ ಪ್ರಥಮ, ಆಳ್ವಾಸ್ ಕಾಲೇಜಿನ ಎಸ್ ದರ್ಶನ್ ಸಮರ್ಥ್ (595 ಅಂಕ) ಹಾಗೂ ಕೆನರಾ ಕಾಲೇಜಿನ ಸ್ಮೃತಿ ತಿಲಾಕ್ (595 ಅಂಕ) ದ್ವಿತೀಯ, ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮೋಕ್ಷಿತ್ ಹೆಗ್ಡೆ (594ಅಂಕ ) ತೃತೀಯ ಸ್ಥಾನ ಗಳಿಸಿದ್ದಾರೆ.
You must be logged in to post a comment Login