Connect with us

    LATEST NEWS

    ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಿದ 63 ಮಂದಿ ಅನಿವಾಸಿ ಕನ್ನಡಿಗರು

    ಮಸ್ಕತ್ ನಿಂದ ಮಂಗಳೂರಿಗೆ ಆಗಮಿಸಿದ 63 ಮಂದಿ ಅನಿವಾಸಿ ಕನ್ನಡಿಗರು

    ಮಂಗಳೂರು ಮೇ.20: ಕೊರೊನಾ ಲಾಕ್ ಡೌನ್ ಹಿನ್ನಲೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಂದೇ ಭಾರತ್ ಮಿಷನ್ ನಲ್ಲಿ ಇಂದು ಮಂಗಳೂರಿಗೆ ಮೂರನೇ ವಿಮಾನ ಆಗಮಿಸಿದೆ.

    ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್ ನಿಂದ ಆಗಮಿಸಿದ ಮೊದಲ ವಿಮಾನ ಇದಾಗಿದೆ. ಸುಮಾರು 63 ಅನಿವಾಸಿ ಕನ್ನಡಿಗರನ್ನು  ಹೊತ್ತು ತಂದ ವಿಮಾನ ಇಂದು ಸಂಜೆ 8.05 ಕ್ಕೆ ಲ್ಯಾಂಡ್‌ ಆಗಿದೆ.

    ಈ ವಿಮಾನ ಮಸ್ಕತ್ ನಿಂದ ಬೆಂಗಳೂರಿಗೆ ಆಗಮಿಸಿ, ಅಲ್ಲಿನ ಅನಿವಾಸಿ ಕನ್ನಡಿಗರನ್ನು  ಇಳಿಸಿದ ನಂತರ ಮಂಗಳೂರಿಗೆ ವಿಮಾನ ಆಗಮಿಸಿತು.

    ಅನಿವಾಸಿ ಕನ್ನಡಿಗರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ನಂತರ  ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಮಾಡಲಾಗಿತ್ತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು.

    ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು.ನಂತರ ಪ್ರಯಾಣಿಕರಿಗೆ ರಾತ್ರಿ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ. ಎರ್ ಪೋರ್ಟ್ ನಲ್ಲಿನ ಎಲ್ಲಾ ಪರೀಕ್ಷೆಗಳ ನಂತರ ಎಲ್ಲಾ ಪ್ರಯಾಣಿಕರನ್ನು  ನಿಗದಿತ ಕ್ವಾರೆಂಟೈನ್ ಕೇಂದ್ರಗಳಿಗೆ  ಕರೆದುಕೊಂಡು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಒದಗಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply