ಕೊರೊನಾ ಗೆದ್ದ ಅಜ್ಜ ಮೊಮ್ಮಗಳನ್ನು ಆದರದಿಂದ ಬರಮಾಡಿಕೊಂಡ ಬೊಳೂರಿನ ನಿವಾಸಿಗಳು

ಮಂಗಳೂರು ಮೇ.20: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಆತಂಕ ಸೃಷ್ಠಿಸಿದ್ದ ಬೋಳೂರಿನ ಕೊರೊನಾ ಪ್ರಕರಣದಲ್ಲಿ ಇಂದು 62 ವರ್ಷದ ಅಜ್ಜ ಮತ್ತು 11 ವರ್ಷದ ಬಾಲಕಿ ಕೊರೊನಾ ಸೊಂಕಿನಿಂದ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

 ಬೊಳೂರಿನ ಒಂದೇ ಕುಟುಂಬದ ಆರು ಜನರಿಗೆ ಕೊರೊನಾ ಬಾಧಿಸಿದ್ದು, 62 ವರ್ಷದ ವೃದ್ಧ ಕೊರೊನಾದಿಂದ ತನ್ನ ಪತ್ನಿ ಹಾಗೂ ಅತ್ತೆ ಯನ್ನು ಕಳೆದುಕೊಂಡಿದ್ದರು. ಇದೀಗ ವೃದ್ದ ಹಾಗೂ ಆತನ 11 ರ ಮೊಮ್ಮಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ ಬಾಲಕಿಯ ತಂದೆ ತಾಯಿಗೆ ಇನ್ನೂ ಕೊರೊನಾ ಚಿಕಿತ್ಸೆ ಮುಂದುವರಿಸಲಾಗಿದೆ.

ಅಜ್ಜ ಮತ್ತು ಮೊಮ್ಮಗಳನ್ನು ತಮ್ಮ ಮನೆಗೆ ಹಿಂತಿರುಗುತ್ತಿದ್ದಂತೆ ಬೋಳೂರಿನ ನಿವಾಸಿಗಳು ಅವರನ್ನು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಮಾನಸಿಕ ಸ್ಥೈರ್ಯ ತುಂಬಿದರು. ಇದೇ ವೇಳೆ ಅವರು ವಾಸವಾಗಿದ್ದ ಮನೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಯಿತು