950 ಕೊರೊನಾ ಪರಿಕ್ಷೆ ಫಲಿತಾಂಶ ನಿರೀಕ್ಷೆಯಲ್ಲಿ ಉಡುಪಿ ಜಿಲ್ಲಾಡಳಿತ

ಉಡುಪಿ ಮೇ.21: ಉಡುಪಿಗೆ ಇಂದು ಆತಂಕದ ದಿನವಾಗಿ ಮಾರ್ಪಡುವ ಸಾಧ್ಯತೆಗಳು ಇದ್ದು ಇಂದು ಒಂದೇ ದಿನ ಬರೊಬ್ಬರಿ 987 ಕೊರೊನಾದ ವರದಿಗಳು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ.

ಈಗಾಗಲೇ ಮುಂಬೈನಿಂದ ಆಗಮಿಸಿದ ಕರಾವಳಿಗರಿಂದ ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಇಂದು ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿ ನಿರೀಕ್ಷೆ ಇದ್ದು ಇದು ಇಂದು ಕೊರೊನಾ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 2 ಪಾಸಿಟಿವ್ ಪ್ರಕರಣಗಳು ಇದ್ದು, ಮಂಗಳವಾರ ದುಬೈನಿಂದ ಬಂದಿದ್ದ 49 ಪ್ರಯಾಣಿಕರು ಆಗಮಿಸಿದ್ದು ಅವರ ಕೊರೊನಾ ಪರೀಕ್ಷೆಯ ವರದಿ ಇಂದು ಬರುವ ಸಾಧ್ಯತೆ ಇದೆ. ಇನ್ನು ಮುಂಬೈ ಕೊರೊನಾ ಸೊಂಕಿತರ ಪ್ರಾಥಮಿಕ ಸಂಪರ್ಕ ಇದ್ದವರ ವರದಿಯೂ ಬರುವ ಸಾಧ್ಯತೆ ಇದೆ. ಒಟ್ಟಾರೆ ಇಂದು ಉಡುಪಿಯಲ್ಲಿ ಬರೋಬ್ಬರಿ 987 ವರದಿಯನ್ನು ಆರೋಗ್ಯ ಇಲಾಖೆ ನಿರೀಕ್ಷಿಸುತ್ತಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ.