LATEST NEWS
ಉಡುಪಿಯಲ್ಲಿ ದಾಖಲಾಯ್ತು ಕರೋನಾ ವೈರಸ್ ನ ಮೊದಲ ಪ್ರಕರಣ
ಉಡುಪಿಯಲ್ಲಿ ದಾಖಲಾಯ್ತು ಕರೋನಾ ವೈರಸ್ ನ ಮೊದಲ ಪ್ರಕರಣ
ಉಡುಪಿ ಮಾರ್ಚ್ 25: ಉಡುಪಿ ಜಿಲ್ಲೆಯಲ್ಲಿ ಮೊದಲ ಕೋರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಮಾರ್ಚ್ 18 ರಂದು ದುಬೈ ನಿಂದ ಬಂದಿದ್ದ ಯುವಕನಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ.
ದುಬೈ ನಿಂದ ಆಗಮಿಸಿದ್ದ ಉಡುಪಿ ಜಿಲ್ಲೆಯ 34 ವರ್ಷದ ಯುವಕ ಜ್ವರದ ಕಾರಣ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ, ನಂತರ ಈತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಾಥಮಿಕ ವರದಿ ಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು DHO ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಇದು ಕೊರೊನಾದ ಪ್ರಾಥಮಿಕ ವರದಿಯಾಗಿದ್ದು, ಈ ವರದಿಯಲ್ಲೇ ಕೊರೊನಾದ ಅಂಶಗಳು ಪತ್ತೆಯಾಗಿದೆ ಎಂದು ಡಿಎಚ್‍ಒ ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ. ಕೊರೊನಾ ಪತ್ತೆಯಾಗಿರುವ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಆ ನಂತರ ಕ್ಯಾಬ್ ಮೂಲಕ ಮನೆಗೆ ಹೋಗಿದ್ದಾನೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ. ಈತ ಯಾರ ಜೊತೆಯಲ್ಲಿ ಸಂಪರ್ಕ ಹೊಂದಿದ್ದ? ಐದು ದಿನಗಳ ಕಾಲ ಎಲ್ಲೆಲ್ಲಾ ಓಡಾಟ ನಡೆಸಿದ್ದಾನೆ ಎಂಬ ಬಗ್ಗೆ ವೈದ್ಯರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ದೇಶಾದ್ಯಂತ ಮತ್ತು ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಇರುವಾಗಲೇ ಈತ ದುಬೈಗೆ ಯಾವುದೇ ಕೆಲಸದ ನಿಮಿತ್ತ ತೆರಳಿಲ್ಲ. ಬದಲಾಗಿ ದುಬೈ ಪ್ರವಾಸಕ್ಕೆಂದು ಹೋಗಿದ್ದಾನೆಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಇರುವ ಯುವಕ ಕಳೆದ ಎರಡು ದಿನಗಳಿಂದ ಚಿಕಿತ್ಸೆಗೆ ಕೊಂಚ ಸ್ಪಂದಿಸುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಆತನಿಗೆ ಚಿಕಿತ್ಸೆ ಕೊಡಲಾಗುತ್ತಿದೆ.