ಪೊಲೀಸ್ ರೋಡ್ ಬಂದ್ ಮಾಡಿದರೆ ಬೋಟ್ ಮೂಲಕ ತಿರುಗಾಡಲು ಆರಂಭಿಸಿದ ಜನ

ಮಂಗಳೂರು ಮಾರ್ಚ್ 25: ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ.
ಈ ಕಾರಣಕ್ಕಾಗಿ ಎಲ್ಲಾ ರೀತಿಯ ಸಂಚಾರಿ ವ್ಯವಸ್ತೆಗಳನ್ನು ಬಂದ್ ಮಾಡಲು ಆದೇಶವನ್ನೂ ಹೊರಡಿಸಿದ ಹಿನ್ನಲೆಯಲ್ಲಿ ಬಸ್, ಆಟೋ, ರೈಲು ,ವಿಮಾನ ಸೇರಿದಂತೆ ಎಲ್ಲಾ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.

ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಮಂದಿ ಇದೀಗ ಬೋಟ್ ಗಳ ಮೂಲಕ ತಿರುಗಾಡಲು ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳೂರಿನಿಂದ ಉಳ್ಳಾಲ ಪರಿಸರಕ್ಕೆ ಹಲವು ಬೋಟ್ ಗಳು ನೇತ್ರಾವತಿ ನದಿ ಮೂಲಕ ಸಂಚರಿಸುತ್ತಿದೆ ಎನ್ನಲಾಗಿದೆ.

ಒಂದೊಂದು ಬೋಟ್ ನಲ್ಲಿ ಐದಾರು ಜನ ಒಟ್ಟಾಗಿ ಪ್ರಯಾಣಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ. ಮಂಗಳೂರಿನ ಬೆಂಗ್ರೆ ಪ್ರದೇಶದಿಂದ ಉಳ್ಳಾಲ ಭಾಗಗಳಿಗೆ ಈ ಬೋಟ್ ಗಳು ಸಂಚರಿಸುತ್ತಿದ್ದು, ಕೊರೊನಾ ಭೀತಿಯನ್ನು ಈ ಜನರು ಗಾಳಿಗೆ ತೂರಿ ಸಂಚರಿಸುತ್ತಿದ್ದಾರೆ.