ಬ್ರಹ್ಮರಕೊಟ್ಲು ಬಳಿ ಪ್ಲೈವುಡ್ ಮಿಲ್ ನಲ್ಲಿ ಬೆಂಕಿ ಆಕಸ್ಮಿಕ ಸುಟ್ಟು ಹೋದ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು

ಬಂಟ್ವಾಳ ಅ. 23:ಶಾರ್ಟ್ ಸರ್ಕೂಟ್ ನಿಂದಾಗಿ ಬಂಟ್ವಾಳದ ಬ್ರಹ್ಮರಕೊಟ್ಲು ಬಳಿ ಕಾರ್ಯಾಚರಿಸುತ್ತಿದ್ದ ಪ್ಲೈವುಡ್ ಮಿಲ್ ಗೆ ಬೆಂಕಿ ತಗುಲಿದ ಘಟನೆ ನಡೆದಿದೆ. ಕೆ. ಹಮೀದ್ ಎಂಬವರಿಗೆ ಸೇರಿದ್ದ ಕೋಸ್ಟಲ್ ವುಡ್ ಪ್ರೋಡಕ್ಟ್ಸ್ ಮಿಲ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದೆ.

ಮುಂಜಾನೆ 4 ಗಂಟೆಗೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಇಲ್ಲಿ ಕೆಲಸ ಮಾಡುತ್ತಿದ್ದ ವಾಚ್ ಮ್ಯಾನ್ ಮಿಲ್ ಮಾಲಕರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿತ್ತು. 4 ಘಟಕದ ಅಗ್ನಿಶಾಮಕದಳ ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.