Connect with us

    LATEST NEWS

    ಕರಾವಳಿಯಲ್ಲಿ ಮುಂಜಾನೆಯಿಂದಲೇ ಮಳೆ ಪ್ರಾರಂಭ ರೆಡ್ ಅಲರ್ಟ್ ಘೋಷಣೆ

    ಕರಾವಳಿಯಲ್ಲಿ ಮುಂಜಾನೆಯಿಂದಲೇ ಮಳೆ ಪ್ರಾರಂಭ ರೆಡ್ ಅಲರ್ಟ್ ಘೋಷಣೆ

    ಮಂಗಳೂರು ಅ.23: ಮುಂಗಾರು ಮಳೆ ನಂತರ ಹಿಂಗಾರು ಮಳೆ ಕರಾವಳಿಯಲ್ಲಿ ಆರ್ಭಟ ಮುಂದುವರೆಸಿದೆ. ಇಂದು ಬೆಳಿಗ್ಗೆಯಿಂದಲೇ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸಾಧಾರಾಣ ಮಳೆ ಆರಂಭವಾಗಿದೆ.

    ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ‌ ಇಂದು ಮತ್ತೆ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಭಾರಿ ಮಳೆ ಹಿನ್ನಲೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿಯ ಭಾಗದಲ್ಲಿ ಎಚ್ಚರಿಕೆಯಲ್ಲಿರುವಂತೆ ಹವಮಾನ ಇಲಾಖೆ ಸೂಚನೆ ನೀಡಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply