Connect with us

    LATEST NEWS

    ಗೀಸರ್ ಆನ್ ಮಾಡಿ ದೀಪಾವಳಿ ಶಾಪಿಂಗ್‌ಗೆ ಹೋದ ಕುಟುಂಬಕ್ಕೆ ವಾಪಸ್ ಬರೋವಷ್ಟರಲ್ಲಿ ಕಾದಿತ್ತು ಶಾಕ್..!

    ಹೈದರಾಬಾದ್:  ಕುಟುಂಬವೊಂದು ದೀಪಾವಳಿಗೆ ಶಾಪಿಂಗ್‌ಗೆಂದು ಮನೆಯಿಂದ ಹೊರಗೆ ಹೋಗಿದ್ದು, ಈ ವೇಳೆ ತಿಳಿಯದೇ ಮೆನಯ ಗೀಸರ್ ಆನ್ ಮಾಡಿದ್ದರಿಂದ ಇಡೀ ಮನೆ ಸುಟ್ಟು ಹೋದ ಘಟನೆ ಹೈದ್ರಾಬಾದಿನಲ್ಲಿ ಸಂಭವಿಸಿದೆ.

    ಹೈದರಾಬಾದ್‌ನ ನಲ್ಲಗಂಡ್ಲದ ಅಪರ್ಣಾ ಸರೋವರ ಸೊಸೈಟಿಯಲ್ಲಿ ದೀಪಾವಳಿ ಹಬ್ಬ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಕುಟುಂಬವೊಂದು ಗೀಸರ್ ಅನ್ನು ಸ್ವಿಚ್ ಆನ್ ಮಾಡಿ ದೀಪಾವಳಿ ಶಾಪಿಂಗ್‌ಗೆ ಹೊರಟಿತು. ಸೊಸೈಟಿಯವರು ಹಬ್ಬಕ್ಕೆ ಹೆಚ್ಚುವರಿ ವಿದ್ಯುತ್ ತೆಗೆದುಕೊಳ್ಳುತ್ತಿದ್ದರಿಂದ ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಕೊಠಡಿಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ಸೊಸೈಟಿಯಲ್ಲಿ ಬೆಂಕಿ ಕಾಣಿಸಿಕೊಂಡು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮನೆಯ ಎರಡು ಕೊಠಡಿಗಳು ಸುಟ್ಟು ಕರಕಲಾಗಿವೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    Share Information
    Advertisement
    Click to comment

    You must be logged in to post a comment Login

    Leave a Reply