KARNATAKA
ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ 4 ಅಂತಸ್ತಿನ ಕಟ್ಟಡ
ಬೆಂಗಳೂರು, ನವೆಂಬರ್ 13: ಇತ್ತೀಚಿನ ದಿನಗಳಲ್ಲಿ ಆಗಾಗ ಒಂದಾದ ಮೇಲೊಂದರಂತೆ ಅಗ್ನಿ ಅವಘಡ ಸಂಭವಿಸುತ್ತಲೇ ಇದೆ. ಇದೀಗ ಬಾಣಸವಾಡಿ ಔಟರ್ ರಿಂಗ್ ರೋಡ್ ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ಕೂದಲೆಳೆ ಅಂತರದಲ್ಲಿ ಕಟ್ಟಡದೊಳಗೆ ಸಿಲುಕಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಸೆಕ್ಯೂರಿಟಿ ಗಾರ್ಡ್ಗಳನ್ನ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಫರ್ನಿಚರ್ ಶಾಪ್, ಕೋಚಿಂಗ್ ಸೆಂಟರ್, ಐಟಿ ಕಂಪನಿಯ ದಾಖಲೆಗಳು ಸಂಪೂರ್ಣ ಭಸ್ಮವಾಗಿದೆ. ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.
ಅಗ್ನಿ ಅವಘಡಕ್ಕೆ ತುತ್ತಾದ ಕಟ್ಟಡ ಶಂಕರ್ ಎಂಬುವವರಿಗೆ ಸೇರಿದ್ದು, ಶಂಕರ್ ಅವರು ಐದು ವರ್ಷಗಳಿಂದ ಈ ಕಟ್ಟಡ ಬಾಡಿಗೆಗೆ ನೀಡಿದ್ದರು. ಈ ಘಟನೆ ಸಂಬಂಧ ಮಾತನಾಡಿದ ಕಟ್ಟಡ ಮಾಲೀಕ ಶಂಕರ್, ಒಟ್ಟಾರೆ ನಾಲ್ಕು ಮಹಡಿ ಬಾಡಿಗೆಗೆ ನೀಡಲಾಗಿತ್ತು.
ನೆಲ ಮಹಡಿ ಮತ್ತು ಮೊದಲನೇ ಮಹಡಿ ಫರ್ನಿಚರ್ ಶೋರೂಂ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇತ್ತು. ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಸಾಫ್ಟ್‌ವೇರ್ ಕಂಪನಿ ಇತ್ತು. ರಾತ್ರಿ ಸುದ್ದಿ ತಿಳಿದು ಬಂದು ಬಂದು ನೋಡುವಷ್ಟರಲ್ಲಿ ಬೆಂಕಿ ಉರಿಯುತ್ತಿತ್ತು. ಪಟಾಕಿ ಕಿಡಿ ಹತ್ತಿರಬೇಕು ಅನಿಸುತ್ತಿದೆ. ಈಗ ಪೊಲೀಸರಿಗೆ ದೂರು ಕೊಡಬೇಕು ಎಂದು ತಿಳಿಸಿದ್ದಾರೆ.
You must be logged in to post a comment Login