LATEST NEWS
ಫೈರ್ ಬ್ರಾಂಡ್ ಗುರುಪುರ ವಜ್ರದೇಹಿ ಸ್ವಾಮೀಜಿ ರಾಜಕೀಯ ಅಖಾಡಕ್ಕೆ
ಫೈರ್ ಬ್ರಾಂಡ್ ಗುರುಪುರ ವಜ್ರದೇಹಿ ಸ್ವಾಮೀಜಿ ರಾಜಕೀಯ ಅಖಾಡಕ್ಕೆ
ಮಂಗಳೂರು,ಅಕ್ಟೋಬರ್ 31 : ಕರಾವಳಿಯ ಫೈರ್ ಬ್ರಾಂಡ್ ಸ್ವಾಮೀಜಿ ಮಂಗಳೂರು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ರಾಜಕೀಯ ಅಖಾಡಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ.
ಮುಂಬರುವ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಖಾಡಕ್ಕೆ ಇಳಿಯಲಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯ ಫೈರ್ ಬ್ರಾಂಡ್ ರಾಜಶೇಖರಾನಂದ ಸ್ವಾಮೀಜಿ ಅವರನ್ನು ಚುನಾವಣೆಯ ಅಖಾಡಕ್ಕೆ ಇಳಿಸಲು ಆರ್ ಎಸ್ ಎಸ್ ಮತ್ತು ಸಹ ಸಂಘಟನೆಗಳು ಉತ್ಸುಕರಾಗಿವೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಘಪರಿವಾರದ ಹಿಡಿತವಿರುವ ಕರಾವಳಿಯಲ್ಲಿ ಈ ವಿನೂತನ ಪ್ರಯೋಗ ಮಾಡಲು ಸಿದ್ದತೆಗಳು ನಡೆದಿವೆ.
ಈಗಾಗಲೇ ಬಿಜೆಪಿಯ ಪ್ರಭಾವಿ ಹಾಗೂ ಉನ್ನತ ಮಟ್ಟದ ನಾಯಕರು ಗುರುಪುರ ವಜ್ರದೇಹಿ ಸ್ವಾಮೀಜಿಯವರಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವಾಮೀಜಿ ಅವರು ಪ್ರತಿಕ್ರೀಯಿಸಿದ್ದು, 2018 ರ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿಯಿಂದ ಸ್ಪರ್ಧಿಸುವ ಇರಾದೆ ಇದೆ.
ಅನೇಕರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರೂ, ರಾಜ್ಯದಲ್ಲಿ ಹಿಂದುತ್ವದ ಬಗ್ಗೆ ಹೆಚ್ಚಿನ ಕೆಲಸ ಕಾರ್ಯಗಳು ನಡೆದಿಲ್ಲ.
ಈ ಹಿನ್ನೆಲೆಯಲ್ಲಿ ಹಿಂದುತ್ವವನ್ನೇ ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಅಪೇಕ್ಷೆ ಮತ್ತು ಒತ್ತಾಯದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೆನೆ.
ಕರಾವಳಿಯ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿದೆ ಎಂದರು.
UP ಪ್ರಯೋಗ ಕರಾವಳಿಯಲ್ಲಿ ಯಶ ಕಂಡಿತೇ ? :
ಈಗಾಗಲೇ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಈ ಪ್ರಯೋಗ ಯಶಸ್ವಿಯಾಗಿದೆ.
ಯೋಗಿ ಆದಿತ್ಯನಾಥ್ ಭಾರಿ ಬಹುಮತದಲ್ಲಿ ಚುನಾವಣೆ ಎದುರಿಸಿ ವಿಜಯಶಾಲಿಯಾಗಿ ಮುಖ್ಯಮಂತ್ರಿಗಾದಿಯನ್ನು ಅಲಂಕರಿಸಿದ್ದಾರೆ.
ಅದೇ ಮಾದರಿ ಕರ್ನಾಟಕದಲ್ಲೂ ಈ ಪ್ರಯೋಗ ನಡೆಸಲು ಬಿಜೆಪಿ ಮತ್ತು ಸಂಘಪರಿವಾರ ಚಿಂತನೆ ನಡೆಸಿದೆ.
ಫೈರ್ ಬ್ರಾಂಡಿನ ವಜ್ರದೇಹಿ ಸ್ವಾಮೀಜಿಗೆ ಅವರದ್ದೇ ಆದ ಹಿಂದೂ ಕಾರ್ಯಕರ್ತರ ಹಾಗೂ ನಾಯಕರುಗಳ ಬೆಂಬಲವಿದೆ.
ಸ್ಪಷ್ಟ ಫಲಿತಾಂಶಕ್ಕೆ ಇನ್ನು ಒಂದೆರಡು ತಿಂಗಳು ಕಾಯಬೇಕಿದೆ.
You must be logged in to post a comment Login