Connect with us

LATEST NEWS

ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ

ಮಂಗಳೂರು. ನವೆಂಬರ್ 01 : ಕನ್ನಡ ರಾಜ್ಯೋತ್ಸವ ಮಂಗಳೂರಿನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದರು.

ಜಿಲ್ಲಾಡಳಿತದ ಅಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ . ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿ ವಿವಿಧ ಪೊಲೀಸ್ ಪ್ಲಟೂನ್ ಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದ ಸಚಿವರು ಕನ್ನಡನಾಡಿನ ಅಭಿವೃದ್ಧಿಗೆ ರಾಜಮಹಾರಾಜರು ವಿಶಿಷ್ಠ ಕೊಡುಗೆ ನೀಡಿದ್ದಾರೆ.

ಕನ್ನಡ ನಾಡು- ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು.

ಪ್ರಾಥಮಿಕ ಶಾಲೆಗಳಿಂದಲೇ ಕನ್ನಡ ಕಡ್ಡಾಯಕ್ಕೆ ಕನ್ನಡಿಗರ ಇಚ್ಛಾಶಕ್ತಿ ಅಗತ್ಯವಿದೆ ಎಂದು ಪ್ರತಿಪಾದಿಸಿದ ಸಚಿವರು, ನಾಡು- ನುಡಿಯ ಅಭಿವೃದ್ಧಿಯಾಗಬೇಕಾದರೆ ನೆಲದ, ಜನರ ಅಭಿವೃದ್ದಿಯಾಗಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಮುಖ್ಗಯ ಸಚೇತಕ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಐಜಿಪಿ ಹೇಮಂತ್ ನಿಂಬಾಳ್ಕರ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಪಾಲಿಕೆ ಮೇಯರ್ ಕವಿತಾ ಸನಿಲ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಡಾ. ನಂದಕಿಶೋರ್ ಡಿ.ಕೃಷ್ಣ ಸಾಲ್ಯಾನ್, ಕೋಟಿ ಪರವ ಮಾಡಾವು, ಬೆಂಗ್ರೆ ವಿಜಯ ಸುವರ್ಣ, ಕೇಶವ ಕುಂದರ್, ಶ್ರೀಧರ ಹೊಳ್ಳ, ಕೆ.ಆರ್.ನಾಥ್, ಮೋನಪ್ಪ ಆಚಾರ್ಯ, ಅಶೋಕ್ ಭಟ್ ಎನ್, ವಿನ್ನಿ ಫೆರ್ನಾಂಡಿಸ್, ಅಶೋಕ್ ಭಟ್ ಎನ್ ಮುಂತಾದವರಿಗೆ ಜಿಲ್ಲಾ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.