LATEST NEWS
ಗೂಗಲ್ ಮ್ಯಾಪ್ ಇಂಡಿಯಾ ವಿರುದ್ದ ಎಫ್ಐಆರ್ – ಕಾರಣ ಏನು ಗೊತ್ತಾ..?
ಉತ್ತರಪ್ರದೇಶ ನವೆಂಬರ್ 26: ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಂಚರಿಸಿ ಮೂವರು ಸಾವನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಗೂಗಲ್ ಮ್ಯಾಪ್ ಇಂಡಿಯಾ ಮತ್ತು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ರಾಯ್‌ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಬರೇಲಿ ಸಮೀಪ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬಳಸಿದ್ದಾರೆ. ಆದರೆ, ಆ ಸೇತುವೆ ಅಪೂರ್ಣವಾಗಿತ್ತು. ಇದರಿಂದ ನದಿಗೆ ರಬಸವಾಗಿ ಬಿದ್ದ ಕಾರು ಸಂಪೂರ್ಣ ಜಖಂಗೊಂಡಿತ್ತು. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು.
ಮೃತರನ್ನು ಫಾರೂಕಾಬಾದ್‌ನ ಸಹೋದರರಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ. ಗೂಗಲ್ ಮ್ಯಾಪ್ ಹಾಗೂ ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲ ಕಡೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ ಎಂದು ಬದೌನ್ ಡಿಸಿ ನಿಧಿ ಶ್ರೀವಾಸ್ತವ್ ಹೇಳಿದ್ದಾರೆ. PWD ನಾಲ್ವರು ಎಂಜಿನಿಯರ್ ಹಾಗೂ ಗೂಗಲ್ ಮ್ಯಾಪ್ಸ್ ಪ್ರಾದೇಶಿಕ ಮುಖ್ಯಸ್ಥರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
1 Comment