LATEST NEWS
ಕೊನೆಗೂ ಡಿ.ಕೆ ಶಿವಕುಮಾರ್ ಬಾಯಿಯಿಂದ ಹೊರ ಬಂದ ಸತ್ಯ – ಶೋಭ ಕರಂದ್ಲಾಜೆ

ಕೊನೆಗೂ ಡಿ.ಕೆ ಶಿವಕುಮಾರ್ ಬಾಯಿಯಿಂದ ಹೊರ ಬಂದ ಸತ್ಯ – ಶೋಭ ಕರಂದ್ಲಾಜೆ
ಉಡುಪಿ ಅಕ್ಟೋಬರ್ 19: ವೋಟ್ ಬ್ಯಾಂಕ್ ಗಾಗಿ ಲಿಂಗಾಯತ ವೀರಶೈವರನ್ನು ಒಡೆಯುವ ಷಡ್ಯಂತ್ರ ಮಾಡಿ ಅವರದೇ ಮಂತ್ರಿಗಳನ್ನು ಛೂಬಿಟ್ಟು ಜಾತಿ-ಜಾತಿ ಒಡೆಯುವ ಕೆಲಸವನ್ನು ಕಾಂಗ್ರೇಸ್ ಮಾಡಿದ್ದು, ಈಗ ಡಿ.ಕೆ.ಶಿವಕುಮಾರ್ ಬಾಯಿಯಿಂದ ಆ ಸತ್ಯ ಹೊರಬಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯ ಬೈಂದೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೇಸ್ ತನ್ನ 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನ ಮುಖಂಡರು ದೇಶದಲ್ಲಿ ಜಾತಿ ಒಡೆಯುವುದನ್ನು ಮಾಡಿದ್ದಾರೆ. ಧರ್ಮವನ್ನು ಒಡೆದು ಅಧಿಕಾರದಲ್ಲಿ ಉಳಿಬೇಕು ಎಂಬ ದುರಾಸೆಯಲ್ಲಿದ್ದಾರೆ. ಆದರೆ ರಾಜ್ಯದ ಜನಕ್ಕೆ ಇದು ಅರ್ಥ ಆಗದ್ದು, ಕಾಂಗ್ರೆಸ್ ನಲ್ಲಿದ್ದ 120 ಸ್ಥಾನವನ್ನು 78ಕ್ಕೆ ಜನ ಇಳಿಸಿದ್ದಾರೆ. ಈಗ 78 ಸ್ಥಾನದಲ್ಲಿರುವ ಕಾಂಗ್ರೇಸ್ 8 ಕ್ಕೆ ಇಳಿಯುವ ಸೂಚನೆ ರಾಜ್ಯದಲ್ಲಿ ಕಾಣ್ತ ಇದೆ, ಕಾಂಗ್ರೆಸ್ ನ ಧರ್ಮ ಒಡೆಯುವ ಕೆಲಸ ರಾಜ್ಯದ ಜನರಿಗೆ ಇದು ಅರ್ಥ ಆಗಿದೆ

ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎನ್ನುವುದಕ್ಕೆ ಬಿ.ಜೆ.ಪಿ ಬದ್ದವಾಗಿದೆ. ಆಚರಣೆ ಮಾಡಿದ್ರೆ ನಾವು ವಿರೋಧ ಮಾಡ್ತೇವೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಾಯ್ಯ ಸರ್ಕಾರ ಮಾಡಿದ ತಪ್ಪನ್ನು ಕುಮಾರಸ್ವಾಮಿ ಮಾಡಬಾರದು, ಟಿಪ್ಪು ಜಯಂತಿಯಿಂದ ಯಾರು ಉದ್ದಾರ ಆಗಿಲ್ಲ, ಯಾರಿಗೂ ಲಾಭ ಆಗಿಲ್ಲ ,ಸಮಾಜವನ್ನು ಒಡೆದಿದೆ, ಸಂಘರ್ಷ ಉಂಟು ಮಾಡಿದೆ, ಹಲವಾರು ಜನರ ಮೇಲೆ ಕೇಸ್ ಇದೆ,ಜೈಲಿಗೆ ಹೋಗಿದ್ದಾರೆ, ಈ ಹಿನ್ನಲೆಯಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಮಾಡಬಾರದು ಎಂದು ಹೇಳಿದರು..
ಮೈಸೂರಿನಲ್ಲಿ ಕಿತ್ತಾಟದ ರಾಜಕೀಯ ನಡೆಯುತ್ತದೆ. ಸಾ.ರ ಮಹೇಶ್, ಜಿ.ಟಿ ದೇವೆಗೌಡ ಮದ್ಯೆ ಕಿತ್ತಾಟ ನಡೆಯುತ್ತಿದೆ. ಜೆ.ಡಿ.ಎಸ್ ನ ಒಳಗೆಯೇ ಕಿತ್ತಾಟ ಶುರುವಾಗಿದೆ
ಮೈಸೂರು ದಸರಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಯಾವುದೇ ಶಾಸಕರು ದಸಾರದಲ್ಲಿ ಭಾಗವಹಿಸಿಲ್ಲ, ಕಾಂಗ್ರೇಸ್ ನ ಶಾಸಕರಿ ದಸರಾ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರೀ ದಸರಾ ಕಮಿಟಿಯೇ ರಚನೆ ಆಗಿಲ್ಲ
ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗಿದ್ದು , 150 ಜನ ಹೆಣ್ಣುಮಕ್ಕಳು ನಮ್ಮ ಮೇಲೆ ದೌರ್ಜನ್ಯ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಇವತ್ತಿನವರೆಗೂ ಒಂದೇ ಒಂದು ಕೇಸ್ ಪತ್ತೆ ಮಾಡಿಲ್ಲ. ಮೊದಲ ಬಾರಿ ತಾಯಿ ಚಾಮುಂಡೇಶ್ವರಿ ದಸರಾದಲ್ಲಿ ಈ ರೀತಿ ಹೆಣ್ಮಕ್ಕಳ ಮೇಲೆ ಕೈ ಮಾಡುವಂತದ್ದು ನಡೆದಿದೆ. ಇದಕ್ಕೆ ಈ ಸರ್ಕಾರನೇ ಜವಬ್ದಾರಿ ಹೊರಬೇಕು, ಸರ್ಕಾರ ಇದೆಯಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.