Connect with us

LATEST NEWS

ಆತಂಕ ಸೃಷ್ಠಿಸಿದ ಹೈಡ್ರೋಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಲೀಕ್

ಆತಂಕ ಸೃಷ್ಠಿಸಿದ ಹೈಡ್ರೋಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಲೀಕ್

ಮಂಗಳೂರು ಅಕ್ಟೋಬರ್ 19: ಹೈಡ್ರೋಕ್ಲೋರಿಕ್ ಆಸಿಡ್ ಕೊಂಡೊಯ್ಯತ್ತಿದ್ದ ಟ್ಯಾಂಕರ್ ಲೀಕ್ ಆದ ಘಟನೆ ಸುರತ್ಕಲ್ ಮುಕ್ಕ ಸಮೀಪ ನಡೆದಿದೆ.

ಸಾಂದರ್ಭಿಕ ಚಿತ್ರ

ಕಾರವಾರದಿಂದ ಕೊಚ್ಚಿನ್ ಗೆ ತೆರಳುತ್ತಿದ್ದ ಟ್ಯಾಂಕರ್ ನಿಂದ ಸುರತ್ಕಲ್ ಟೋಲ್‍ಗೇಟ್ ಬಳಿ ರಸ್ತೆಯಲ್ಲಿ ಹೊಗೆ ಹಾಗೂ ಭಾರೀ ವಾಸನೆ ಬಂದಿದೆ. ಈ ಹಿನ್ನಲೆಯಲ್ಲಿ ಮುಕ್ಕದಿಂದ ವಾಹನ ಚಲಿಸದಂತೆ ಪೊಲೀಸರು ತಡೆದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ನ್ನು ನಿಲ್ಲಿಸಲಾಗಿತ್ತು.

ಹೈಡ್ರೋಕ್ಲೊರಿಕ್ ಆಸಿಡ್ ಲೀಕ್ ನಿಂದಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನ ಸಂಚಾರ ಬ್ಲಾಕ್ ಆಗಿತ್ತು. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದಿಂದ ಟ್ಯಾಂಕರ್ ನ ಆಸಿಡ್ ಲೀಕ್ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಹಲವು ಹೊತ್ತಿನ ಕಾರ್ಯಾಚರಣೆ ಬಳಿಕ ಮುಂದುವರಿದ ವಾಹನ ಸಂಚಾರ.