FILM
ತನ್ನ ತಂದೆ ತಾಯಿ ವಿರುದ್ದವೇ ಕೇಸ್ ದಾಖಲಿಸಿ ತಮಿಳಿನ ಖ್ಯಾತ ನಟ ದಳಪತಿ ವಿಜಯ್

ಚೆನ್ನೈ : ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಅವರ ಅಪ್ಪ ಅಮ್ಮನ ಮೇಲೆಯ ಕೇಸ್ ದಾಖಲಿಸಿರುವ ಘಟನೆ ನಡೆದಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ವಿಜಯ್ ತಂದೆ 2020ರಲ್ಲಿ ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಕ್ಷ ಆರಂಭಿಸಿದ್ದರು. ಆದರೆ ಅದು ವಿಜಯ್‍ಗೆ ಇಷ್ಟವಿಲ್ಲ. ನನ್ನ ತಂದೆಯ ಪಕ್ಷ ಎಂದು ಸಫೋರ್ಟ್ ಮಾಡಬೇಡಿ. ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ. ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಇದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಆ ಬಗ್ಗೆಯೇ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ.

ಈ ಸಂಬಂಧ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ ಚಂದ್ರಶೇಖರ್, ಪಾರ್ಟಿ ಲೀಡರ್ ಪದ್ಮನಾಭನ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ. ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಮ್ ಪಾರ್ಟಿಗೆ ಎಸ್.ಎ. ಚಂದ್ರಶೇಖರ್ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ತಾಯಿ ಶೋಭಾ ಚಂದ್ರಶೇಖರ್ ಅವರು ಖಜಾಂಚಿ ಆಗಿದ್ದಾರೆ.
ಈ ಎಲ್ಲ ವಿಚಾರವಾಗಿ ಬೇಸತ್ತ ವಿಜಯ್ ನನ್ನ ತಂದೆ ನೀಡಿರುವ ರಾಜಕೀಯ ಹೇಳಿಕೆಗಳೊಂದಿಗೆ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ ಎಂದು ವಿಜಯ್ ಹೇಳಿದ್ದರು. ಪಕ್ಷಕ್ಕೆ ವಿಜಯ್ ಹೆಸರಿದೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಜಯ್ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.