Connect with us

LATEST NEWS

ಅಪಾಯಕಾರಿ ಪ್ರದೇಶಗಳ ಮನೆಗಳ ಜನರನ್ನು ಮುಲಾಜಿಲ್ಲದೆ ಸ್ಥಳಾಂತರಿಸಿ- ಕಂದಾಯ ಸಚಿವ ಆರ್. ಆಶೋಕ್ 

ಅಪಾಯಕಾರಿ ಪ್ರದೇಶಗಳ ಮನೆಗಳ ಜನರನ್ನು ಮುಲಾಜಿಲ್ಲದೆ ಸ್ಥಳಾಂತರಿಸಿ- ಕಂದಾಯ ಸಚಿವ ಆರ್. ಆಶೋಕ್ 

ನೆರೆ ಹಾಗೂ ಇತರ ಅಪಾಯಕಾರಿ ಪ್ರದೇಶಗಳಲ್ಲಿರುವ ಜನರನ್ನು ಅಧಿಕಾರಿಗಳು ಒತ್ತಾಯಪೂರ್ವಕ ತೆರವುಗೊಳಿಬೇಕು, ನಿರಾಕರಿಸುವವರ ವಿರುದ್ಧ ಪೋಲೀಸ್ ದೂರು ದಾಖಲಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ನಿರ್ದೇಶನ ನೀಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರಾಕೃತಿಕ ವಿಕೋಪ ಕುರಿತ ಮುಂಜಾಗೃತಾ ಸಭೆಯ ಅಧಿಕಾರಿಗಳು ಅವರು ನಿರ್ದೇಶಿಸಿದರು.

ರಾಜ್ಯದಲ್ಲಿ ಮಳೆ ಹಾಗೂ ನೆರೆ ಪ್ರದೇಶಗಳಲ್ಲಿ ಅಪಾಯ ಬರುವ ಮುಂಚೆಯೇ ಆ ಭಾಗದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು.

ಸ್ಥಳಾಂತರಗೊಳ್ಳಲು ವಿರೋಧಿಸುವವರ ಮೇಲೆ ಪೋಲೀಸ್ ದೂರು ದಾಖಲಿಸಿ ಒತ್ತಾಯಪೂರ್ವಕವಾಗಿ ಕಾಳಜಿ ಕೇಂದ್ರಗಳಿಗೆ ಸೇರಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾಳಜಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಪೌಷ್ಟಿಕ ಆಹಾರವನ್ನು ಪೂರೈಸಲು ಸೂಚಿಸಲಾಗಿದೆ. ಬಡವರಿಗೆ ನೀಡುವ ಆಹಾರದಲ್ಲಿ ಕಂಜೂಸ್ ತನ ಮಾಡುವಂತಿಲ್ಲ.

ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ವಿಪತ್ತು ನಿರ್ವಹಣೆಗೆ ಹೆಚ್ಚುವರಿ 5 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಅಲ್ಲದೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಈಗಾಗಲೇ 23 ಕೋಟಿ ರೂಪಾಯಿ ಹಣವಿದ್ದು, ತುರ್ತು ಸಂದರ್ಭಗಳ ನಿರ್ವಹಣೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ರಾಜ್ಯದ ಪ್ರತೀ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ಪಡೆಯನ್ನು ರಚಿಸಲು ಸರಕಾರ ತೀರ್ಮಾನಿಸಿದೆ.

ಈ ಪಡೆಗೆ ಆಯಾಯ ಗ್ರಾಮಪಂಚಾಯತ್ ನಿಂದ 10 ಜನರನ್ನು ಆರಿಸಲಾಗುವುದು. ಆಯ್ಕೆಗೊಂಡ ಸದಸ್ಯರಿಗೆ ಸರಕಾರದ ವತಿಯಿಂದ ವಿಪತ್ತು ನಿರ್ವಹಣೆ ಕುರಿತು ತರಭೇತಿಯನ್ನೂ ನೀಡಲಾಗುವುದು.

ಸರಕಾರದ ಹೊಸ ಯೋಜನೆ ಇದಾಗಿದ್ದು, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇದನ್ನು ಪೈಲಟ್ ಪ್ರಾಜೆಕ್ಟ್ ಆಗಿ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ನದಿ ಹಾಗೂ ಹೊಳೆಗಳು ರಸ್ತೆಯಲ್ಲಿ ಹರಿಯುವ ಸಂದರ್ಭದಲ್ಲಿ ಆ ರಸ್ತೆಗಳಲ್ಲಿ ವಾಹನ ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಸಲು ಪೋಲೀಸ್ ಇಲಾಖೆಗೆ ಸಚಿವರು ಇದೇ ಸಂದರ್ಭದಲ್ಲಿ ಸೂಚಿಸಿದರು.

ನೀರು ಇರುವ ಕಡೆಗಳಲ್ಲಿ ಹುಚ್ಚು ಸಾಹಸ ತೋರುವವರ ವಿರುದ್ದವೂ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ನಿರ್ದೇಶನವನ್ನೂ ನೀಡಿದ್ದು, ಅಂಥ ರಸ್ತೆಗಳನ್ನು ನೀರು ತಗ್ಗುವವರೆಗೂ ಸಂಪೂರ್ಣ ಬಂದ್ ಮಾಡುವಂತೆ ಆದೇಶ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *