Connect with us

    FILM

    ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವವಾಗಿ ಪತ್ತೆ….!!

    ಹೈದರಾಬಾದ್ : ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


    35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು. ಶನಿವಾರ ಮಧ್ಯಾಹ್ನ, ಭದ್ರತಾ ತಪಾಸಣೆಗೆ ವೇಳೆ ಅವರು ಪ್ರತಿಕ್ರಿಯಿಸದ ಕಾರಣ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
    ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ಪ್ರತ್ಯೂಷಾ ಸ್ನಾನದ ಕೋಣೆಯಲ್ಲಿ ಶವ ಪತ್ತೆಯಾಗಿದ್ದಾರೆ. ಅವರ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಮತ್ತು ವಾಶ್‌ರೂಮ್‌ನಿಂದ ರಾಸಾಯನಿಕಗಳ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ದೆಹಲಿಯಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply