LATEST NEWS
ರೈತ ಕಾಯ್ದೆ ವಿರೋಧಿ ಹೋರಾಟದಲ್ಲಿ ರೈತ ಮುಖಂಡೆಯ ಚಪ್ಪಲಿ ಕಳವು, ಕೃತ್ಯದ ಹಿಂದೆ ಯು.ಪಿ ಸರಕಾರ ಹಾಗೂ ಪೋಲೀಸರ ಕೈವಾಡ ಆರೋಪ…!!

ಗ್ರೇಟರ್ ನೋಯ್ಡಾ, ಡಿಸೆಂಬರ್ 07: ಕೇಂದ್ರ ಸರಕಾರ ಜಾರಿಗೆ ತಂದ ಕೃಷಿ ಮಸೂದೆಯನ್ನು ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ ಕಿಸಾನ್ ಏಕ್ತಾ ಸಂಘ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯೆಕ್ಷೆ ಗೀತಾ ಭಾಟೀ ಪಾದರಕ್ಷೆಯನ್ನು ಕಳವು ಮಾಡಲಾಗಿದೆ.
ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಕಿಸಾನ್ ಏಕ್ತಾ ಸಂಘದ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಆಗಮಿಸಿದ ಕಿಸಾನ್ ಏಕ್ತಾ ಸಂಘದ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ಗೀತಾ ಭಾಟಿಯವರ ಪಾದರಕ್ಷೆ ಕಳವಾಗಿದೆ. ಪಾದರಕ್ಷೆ ಕಳವಿನ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗೀತಾ ಭಾಟಿ ಈ ಕಳವಿನ ಹಿಂದೆ ಉತ್ತರಪ್ರದೇಶ ಸರಕಾರ ಹಾಗೂ ಪೋಲೀಸರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ತಮ್ಮನ್ನು ಪಾಲ್ಗೊಳ್ಳದಂತೆ ಮಾಡುವ ದುರುದ್ಧೇಶದಿಂದ ಪಾದರಕ್ಷೆಯನ್ನು ಸರಕಾರವೇ ಕಳವು ಮಾಡಿದೆ ಎಂದು ದೂರಿದ್ದಾರೆ. ಪಾದರಕ್ಷೆಯಿಲ್ಲದೆ ತಾನು ರೈತರ ಚಳುವಳಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಸರಕಾರ ಅಂದುಕೊಂಡಿದ್ದು, ಪಾದರಕ್ಷೆ ಇಲ್ಲದೆಯೂ ತಾನು ರೈತರ ಪರವಾಗಿ ನಿಲ್ಲುವುದಾಗಿ ಘೋಷಿಸಿಕೊಂಡಿದ್ದಾರೆ. ಸರಕಾರ ಕೂಡಲೇ ತನ್ನ ಪಾದರಕ್ಷೆಯನ್ನು ವಾಪಾಸು ಕೊಡಬೇಕೆಂದೂ ಅವರು ಆಗ್ರಹಿಸಿದ್ದಾರೆ. ಗೀತಾ ಭಾಟಿಯ ಪಾದರಕ್ಷೆಯ ಪುರಾಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಕಾರಣವಾಗಿದೆ.