Connect with us

DAKSHINA KANNADA

1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆ ಭಾರತದ ಇತಿಹಾಸದ‌ ಸುವರ್ಣಾಕ್ಷರಗಳಲ್ಲಿ ಒಂದು- ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು ಡಿಸೆಂಬರ್ 7: 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷತದಲ್ಲಿ ಬರೆದಿಡಬೇಕಾದ ಘಟನೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.


ಪುತ್ತೂರಿನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾಧ್ಯಮಗಳೊಂದಿಗೆ ಮಾತಾಡಿದರು. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಮಗ ತಂದೆಯ ಹೆಸರಿನಲ್ಲಿ ದೇವಸ್ಥಾನವನ್ನು ಕಟ್ಟಿದ್ದ‌. ಅದೇ ಸ್ಥಳದಲ್ಲಿ ರಾಜಾ ವಿಕ್ರಮಾದಿತ್ಯ ಭವ್ಯವಾದ ರಾಮಮಂದಿರವನ್ನು ನಿರ್ಮಿಸಿದ್ದ. ಬಳಿಕದ ದಿನಗಳಲ್ಲಿ ಭಾರತದಲ್ಲಿ ಅಧಿಪತ್ಯ ನಡೆಸಿದ ಬಾಬರ ಎನ್ನುವ ಕ್ರೂರ ಮಹಾರಾಜ ಅಯೋಧ್ಯೆಯ ರಾಮಮಂದಿರವನ್ನು ಕೆಡವಿ ಅಲ್ಲಿ ಮಸೀದಿಯೊಂದನ್ನು ನಿರ್ಮಿಸಿದ್ದಾರೆ.


ಅಯೋಧ್ಯೆಯನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎನ್ನುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಹಲವು ಹೋರಾಟಗಳನ್ನು ಹಮ್ಮಿಕೊಂಡಿದೆ. ಸ್ವಾತಂತ್ರ್ಯದ ಬಳಿಕ ಅಯೋಧ್ಯೆಯನ್ನು ಹಿಂದೂಗಳಿಗೆ ಬಿಟ್ಟು ಕೊಡುವ ವ್ಯವಸ್ಥೆ ಆಗಬೇಕಿತ್ತು. ಆದರೆ ಆ ಪ್ರಕ್ರಿಯೆ ನಡೆಯದ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ 1983 ರಿಂದ ಹೋರಾಟವನ್ನು ತೀವೃಗೊಳಿಸಿದೆ. 1987 ರಲ್ಲಿ ಮೊದಲ ಕರಸೇವೆ ನಡೆದಿತ್ತು.

ಬಳಿಕ 1992 ರಲ್ಲಿ ನಡೆದ ಕರಸೇವೆ ಹಿಂದೂಗಳ ಶಕ್ತಿಯನ್ನು ಪರಿಚಯಿಸಿದೆ. ಷಂಢರಂತಿದ್ದ ಹಿಂದೂ ಸಮಾಜ ಎಚ್ಚೆತ್ತುಕೊಂಡಾಗ ಅಯೋಧ್ಯೆಯಲ್ಲಿದ್ದ ಬಾಬರ‌ ಮಸೀದಿ ದ್ವಂಸವಾಗಿದೆ. ಈ ಘಟನೆ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ವಿಚಾರವೆಂದ ಅವರು ಕರಸೇವೆಯಲ್ಲಿ ಭಾಗವಹಿಸಲು ಸಾಧ್ಯವಾಗದವರಿಗೆ ಈ ಬಾರಿ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ನಿಧಿ‌ ಸಂಗ್ರಹ ನೀಡುವ ಕಾರ್ಯದಲ್ಲಿ ಭಾಗಿಯಾಗಲು ವಿಶ್ವ ಹಿಂದೂ ಪರಿಷತ್ ಅವಕಾಶ ನೀಡಿದೆ‌. ಜನವರಿ 15 ರ ಬಳಿಕ ಫೆಬ್ರವರಿ 27 ರ ವರೆಗೆ ವಿಶ್ವಹಿಂದೂ ಪರಿಷತ್ ದಕ್ಷಿಣಕನ್ನಡ ಜಿಲ್ಲೆಯ ಪ್ರತೀ ಮನೆ ಮನೆಗಡ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಅಭಿಯಾನ ಆರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು.

https://youtu.be/c8adQLQAtm4

Facebook Comments

comments