Connect with us

LATEST NEWS

ಖ್ಯಾತ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ

ಉಡುಪಿ: ಲೇಖಕ, ಖ್ಯಾತ ರಂಗಕರ್ಮಿ, ಉಪನ್ಯಾಸಕರಾಗಿದ್ದ ಉದ್ಯಾವರ ಮಾಧವ ಆಚಾರ್ಯ (80) ಅವರು ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.


ಮೃತರು ಪತ್ನಿ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅರ್ಥಶಾಸ್ತ್ರ ಎಂಎ ಪದವಿ ಪಡೆದಿದ್ದ ಇವರು, ಮೊದಲಿಗೆ ಕುಂದಾಪುರ ಭಂಡಾರಕರ್ಸ್ ಕಾಲೇಜಿನಲ್ಲಿ, ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದರು. 1970, 80, 90ರ ದಶಕದಲ್ಲಿ ಸಣ್ಣ ಕಥೆಗಳ ರಚನೆ, ಗೀತಾ ನಾಟಕಗಳ ಮೂಲಕ ಸಾಹಿತ್ಯ, ರಂಗಭೂಮಿ ಚಟುವಟಿಕೆಯ ಉತ್ತುಂಗದಲ್ಲಿದ್ದರು. ಕನ್ನಡದ ಸಣ್ಣ ಕಥೆಗಾರರಲ್ಲಿ ಇವರು ಪ್ರಮುಖರಾಗಿದ್ದು, ಹಲವಾರು ಕಥೆಗಳನ್ನು ಬರೆದಿದ್ದಾರೆ.
ಮಾಧವ ಆಚಾರ್ಯ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ರಂಗವಿಶಾರದ ಬಿರುದು ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.
ಬಾಗಿದ ಮರ, ಭಾಗದೊಡ್ಡಮ್ಮನ ಕಥೆ ಮುಂತಾದ ಕಥಾ ಸಂಕಲನಗಳು, ಹಾಗೂ ಕವನ ಸಂಕಲನಗಳು ಮತ್ತು ಕೃಷ್ಣನ ಸೋಲು, ಗೋಡೆ, ಗಾಂಧಾರಿ, ರಾಧೆ ಎಂಬ ಗಾಥೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

Facebook Comments

comments