Connect with us

    FILM

    ಮಂಗಳೂರಿನಲ್ಲಿ ಭಾಗ್ ಮಿಲ್ಕಾ ಭಾಗ್ ಖ್ಯಾತಿಯ ಫರ್ಹಾನ್ ಅಖ್ತರ್

    ಮಂಗಳೂರಿನಲ್ಲಿ ಭಾಗ್ ಮಿಲ್ಕಾ ಭಾಗ್ ಖ್ಯಾತಿಯ ಫರ್ಹಾನ್ ಅಖ್ತರ್

    ಮಂಗಳೂರು ಜನವರಿ 13: ಬಾಲಿವುಡ್ ನ ಖ್ಯಾತ ನಟ ಫರ್ಹಾನ್ ಅಖ್ತರ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರಿನಲ್ಲಿ ನಡೆಯಲಿರುವ ಇಂಪೀರಿಯಲ್ ಬ್ಲೂ ಸೂಪರ್ ಹಿಟ್ ನೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ಗ ಫರ್ಹಾನ್ ಅಖ್ತರ್ ಮಾಧ್ಯಮಗಳೊಂದಿಗೆ ಮಾತನಾಡಿದರು.

    ಇಂದಿನ ಆಧುನಿಕ ಯುಗದಲ್ಲಿ ಸಂಗೀತ ಕ್ಕೆ ಹಲವಾರು ವೇದಿಕೆಗಳು ಸೃಷ್ಟಿಯಾಗಿದ್ದು. ಎಲೆಮರೆಯ ಕಾಯಿಯಂತಿದ್ದ ಹಲವಾರು ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದ್ದು ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ಎಂದು ಅವರು ಹೇಳಿದರು.
    ಲೈವ್ ಸಂಗೀತ ಕಾರ್ಯಕ್ರಮ ನೀಡುವುದು ಹೆಚ್ಚು ತ್ರಿಲ್ ಅನಿಸುತ್ತದೆ ಎಂದು ಹೇಳಿದ ಅವರು ಚಿತ್ರಗಳಲ್ಲಿ ಅಭಿನಯ ಹಾಗು ಸಂಗೀತ ಕಾರ್ಯಕ್ರಮ ಎರಡನ್ನು ಮನಪೂರ್ವಕವಾಗಿ ಆಸ್ವಾಧಿಸುತ್ತೆನೆ ಎಂದು ತಿಳಿಸಿದರು.

    ಕಳೆದ 3 ವರ್ಷಗಳಿಂದ ಇಂಪೀರಿಯಲ್ ಬ್ಲೂ ಸೂಪರ್ ಹಿಟ್ ನೈಟ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇದು 4ನೇ ಆವೃತ್ತಿಯಾಗಿದ್ದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಪ್ರೇಕ್ಷಕರನ್ನು ರಂಜಿಸುವುದು ರೋಮಾಂಚನವೆನಿಸಿದೆ ಎಂದು ಅವರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply