LATEST NEWS
ಯಾವುದೇ ಸಹಾಯ ಮಾಡದೇ ಸಂತ್ರಸ್ಥರ ಪೋಟೋ ಬಳಸಿಕೊಂಡ ಶಾಸಕ
ಯಾವುದೇ ಸಹಾಯ ಮಾಡದೇ ಸಂತ್ರಸ್ಥರ ಪೋಟೋ ಬಳಸಿಕೊಂಡ ಶಾಸಕ
ಮಂಗಳೂರು , ಮೇ.4: ಮಂಗಳೂರಿನ ಶಾಸಕರೊಬ್ಬರು ಸಹಾಯ ಮಾಡದೇ ಸಾಧನೆ ಪುಸ್ತಕದಲ್ಲಿ ಸಂತ್ರಸ್ತರ ಪೋಟೋ ಬಳಸಿಕೊಂಡ ಘಟನೆ ನಡೆದಿದೆ. ತಮ್ಮ ಪೋಟೋ ಬಳಕೆ ವಿರುದ್ದ ಸಂತ್ರಸ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗರೆ ತೋಟ ನಿವಾಸಿ ಶರತ್ ಮೆಂಡನ್ ದಂಪತಿಗಳು ಶಾಸಕ ಜೆ.ಆರ್ ಲೋಬೋ ಬಿಡುಗಡೆ ಮಾಡಿರುವ ಪುಸ್ತಕದಲ್ಲಿ ತಮ್ಮ ಭಾವಚಿತ್ರವನ್ನು ಬಳಸಿ ತಮಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರತ್ ಮೆಂಡನ್ ದಂಪತಿ ಮೂರು ವರ್ಷದ ಹಿಂದೆ ಬೆಂಗರೆ ತೋಟದಲ್ಲಿರುವ ನಮ್ಮ ಮನೆ ಬೆಂಕಿ ಅನಾಹುತದಲ್ಲಿ ಸಂಪೂರ್ಣ ಸುಟ್ಟು ಹೋಗಿದೆ. ನಾವು ಬೇರೆ ದಾರಿಯಿಲ್ಲದೆ ಅಕ್ಷರಶ: ಬೀದಿ ಪಾಲಾದೆವು. ಮೀನುಗಾರಿಕೆಯಿಂದ ಬರುವ ಅಲ್ಪ ಅದಾಯ ನಮ್ಮ ಬದುಕಿಗೆ ದಾರಿಯಾಗಿತ್ತು. ಘಟನೆ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಶಾಸಕ ಜೆ.ಆರ್.ಲೋಬೋ ಅವರು ಮನೆ ಕಟ್ಟಲು ಸಹಾಯ ಹಾಗೂ ಬೆಂಕಿ ಅವಘಡ ಸಂಬಂಧ ಪರಿಹಾರ ನೀಡುವ ಭರವಸೆ ನೀಡಿದ್ದರು. ಇದರ ಬಳಿಕ ನಾವು ಹಲವಾರು ಬಾರಿ ಅವರಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು.
ಆದರೆ ಶಾಸಕರು ತಮ್ಮ ಸಾಧನೆಗಳು ಎಂದು ಪ್ರಕಟಿಸಿರುವ ಪುಸ್ತಕದಲ್ಲಿ ನಮ್ಮ ಚಿತ್ರ ಹಾಕಿರುವುದು ಗಮನಕ್ಕೆ ಬಂತು. ಏನು ಸಹಾಯ ಮಾಡದೇ ಬರೇ ರಾಜಕೀಯ ಉದ್ದೇಶಕ್ಕಾಗಿ ನಮ್ಮ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇದು ಏನ್ನನ್ನು ಸೂಚಿಸುತ್ತದೆ ಎನ್ನುವುದನ್ನು ಶಾಸಕರೇ ಹೇಳಬೇಕು ಪ್ರಶ್ನಿಸಿದ್ದಾರೆ.
ಯಾವುದೇ ಕೆಲಸ ಮಾಡದೇ ಈ ರೀತಿ ಪ್ರಚಾರಗಿಟ್ಟಿಸಿಕೊಳ್ಳುವುದು ಶಾಸಕರಿಗೆ ಶೋಭೆ ತರುವುದೇ ? ನಾವು ಅವರನ್ನು ಟೀಕಿಸುವ ಉದ್ದೇಶದಿಂದ ಇಲ್ಲಿ ಬಂದಿಲ್ಲ. ಅದರೆ ನಮ್ಮ ಫೋಟೋ ಹಾಕಿ ಅವರು ಮತ ಪಡೆಯಲು ಮುಂದಾಗಿರುವುದು ನಮಗೆ ನೋವಾಗಿದೆ. ಯಾವ ನಾಯಕರೇ ಅಗಲಿ ಇಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ಹೇಳಿದರು.