LATEST NEWS
ಅರ್ಚಕನ ಜೀವಂತ ದಹನ ಪ್ರಕರಣ, ಅಂತ್ಯಸಂಸ್ಕಾರ ನೆರವೇರಿಸದಿರಲು ಕುಟುಂಬದ ನಿರ್ಧಾರ…….

ಅರ್ಚಕನ ಜೀವಂತ ದಹನ ಪ್ರಕರಣ, ಅಂತ್ಯಸಂಸ್ಕಾರ ನೆರವೇರಿಸದಿರಲು ಕುಟುಂಬದ ನಿರ್ಧಾರ…….
ರಾಜಸ್ಥಾನ, ಅಕ್ಟೋಬರ್ 10: ರಾಜಸ್ಥಾನದ ಕರೌಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ನಡೆದ ಅರ್ಚಕನ ಜೀವಂತ ದಹನ ಘಟನೆ ಇದೀಗ ರಾಜಸ್ಥಾನ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ದೇವಸ್ಥಾನದ ಜಮೀನನ್ನು ಕಬಳಿಸಲು ಬಂದ ದುಷ್ಕರ್ಮಿಗಳನ್ನು ತಡೆದ ಅರ್ಚಕ ಬಾಬುಲಾನ್ (50) ನನ್ನು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೈಲಾಸ್ ಮೀನಾ ಎಂಬಾತನನ್ನು ಪೋಲೀಸರು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಆದರೆ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ತನಕ ಮೃತನ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಅರ್ಚಕನ ಕುಟುಂಬ ಪಟ್ಟು ಹಿಡಿದಿದೆ.
ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ, ಕುಟುಂಬದ ಒರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ಹಾಗೂ ಘಟನೆಗೆ ಕಾರಣರಾದ ಎಲ್ಲಾ ಆರೋಪಿಗಳ ಬಂಧನ ಈ ಎಲ್ಲಾ ಬೇಡಿಕೆಗಳನ್ನು ಮೃತ ಅರ್ಚಕ ಬಾಬುಲಾಲ್ ಕುಟುಂಬ ರಾಜಸ್ಥಾನ ಸರಕಾರದ ಮುಂದಿಟ್ಟಿದೆ.