LATEST NEWS
ಇನ್ನು ಮಂಗಳೂರಿನಲ್ಲಿ ಅಕ್ರಮ ಗೋ ಸಾಗಾಟಕ್ಕೆ ಶಾಶ್ವತ ಭ್ರೇಕ್ ..!
ಮಂಗಳೂರು,ಅಕ್ಟೋಬರ್ 10 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಕ್ರಮ ಗೋ ಸಾಗಾಟಕ್ಕೆ ಶಾಶ್ವತ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.ಈ ನಿಟ್ಟಿಒನಲ್ಲಿ ಅತೀ ಹೆಚ್ಚು ಅಕ್ಮ ಗೋ ಸಾಗಾಟ ಪ್ರಕರಣಗಳು ದಾಖಲಾಗುತ್ತಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 24 ಗಂಟೆಗಳ ಪೊಲೀಸ್ ಚೆಕ್ ಪೋಸ್ಟ್ ಗಳ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯ 32 ಕಡೆ ಚೆಕ್ ಪೋಸ್ಟ್ ರಚಿಸಲು ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ, ಅನೈತಿಕ ಪೊಲೀಸ್ಗಿರಿ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಠಾಣಾಧಿಕಾರಿಗಳು ಮುತುವರ್ಜಿ ವಹಿಸಬೇಕು.
ಆಯಾ ಠಾಣಾ ವ್ಯಾಪ್ತಿಯಲ್ಲಿ ಚೆಕ್ಪೋಸ್ಟ್ಗಳನ್ನು ತೆರೆದು ಕಡ್ಡಾಯವಾಗಿ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಬೇಕು. ಯಾವುದೇ ಕಾರಣಕ್ಕೂ ಸಿಬ್ಬಂದಿ ಕೊರತೆಯ ನೆಪ ಹೇಳುವಂತಿಲ್ಲ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
Facebook Comments
You may like
-
ಮಧ್ಯರಾತ್ರಿಯೂ ಕೆಲಸ ಮಾಡುವ ಮಂಗಳೂರಿನ ಸಬ್ ರಿಜಿಸ್ಟರ್ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವರ ದಿಢೀರ್ ಭೇಟಿ
-
ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ..ಆರೋಪಿ ಪತ್ತೆಗೆ ವಿಶೇಷ ತಂಡ
-
ಯೂಟ್ಯೂಬ್ ವಿಡಿಯೋಗಾಗಿ ಬಾಲಕರ ಕಿಡ್ನಾಪ್….!!
-
ವಿದ್ಯಾರ್ಥಿನಿಯರ ಮೈಮುಟ್ಟಿ ಚುಡಾಯಿಸುತ್ತಿದ್ದ ಅಪ್ರಾಪ್ತನಿಗೆ ಬಿತ್ತು ಧರ್ಮದೇಟು..!!
-
ಪುತ್ತೂರಿನಲ್ಲಿ ಅನ್ಯ ಕೋಮಿನ ಯುವಕರೊಂದಿಗೆ ಯುವತಿ ಕೆಫೆಯಲ್ಲಿ ಪತ್ತೆ
-
ಅಣ್ಣಾಮಲೈಯವರ ಅನುಭವದ ಬುತ್ತಿ ‘ಸ್ಟೆಪ್ಪಿಂಗ್ ಬಿಯಾಂಡ್ ಖಾಕಿ’ 18ರಂದು ಬಿಡುಗಡೆ
You must be logged in to post a comment Login