Connect with us

LATEST NEWS

ಮುಂದುವರಿದ ಶಾಲೆ ಆರಂಭದ ಗೊಂದಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆಯೇನು ?

ಮುಂದುವರಿದ ಶಾಲೆ ಆರಂಭದ ಗೊಂದಲ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆಯೇನು ?

ಬೆಂಗಳೂರು, ಅಕ್ಟೋಬರ್ 10: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಶಾಲಾ-ಕಾಲೇಜು ಪುನರ್ ಆರಂಭ ಇದೀಗ ಗೊಂದಲ

ಗೂಡಾಗಿದೆ.

 

ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆ ಆರಂಭ ಬೇಡ ಎಂದಿದ್ದರೆ, ಸರ್ಕಾರ ತರಗತಿ ಆರಂಭಕ್ಕೆ ಕಸರತ್ತು ನಡೆಸುತ್ತಿದೆ

.ಈ ನಡುವೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶಾಲೆ ಪುನರಾರಂಭಿಸುವ ಸರಕಾರದ ನಿರ್ಧಾರದ ವಿರುದ್ಧ ಕಿಡಿ ಕಾರಿದ್ದಾರೆ.

ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರಕಾರ ಮಕ್ಕಳ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಶಾಲೆ ಆರಂಭದ ಕುರಿತು ವಿರೋಧ ವ್ಯಕ್ತಪಡಿಸಿದ್ದ ಪೋಷಕರಿಗೆ ಶಾಕ್ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆ ಆರಂಭಿಸುವಂತೆ ಸರಕಾರಕ್ಕೆ ಸೂಚಿಸಿತ್ತು.

ಆಯೋಗದ ಈ ವರದಿಗೆ ಇದೀಗ ಭಾರಿ ಟೀಕೆ ಬಂದ ಹಿನ್ನಲೆಯಲ್ಲಿ ಆಯೋಗ ಇದೀಗ ಉಲ್ಟಾ ಹೊಡೆದಿದೆ.

ಪೋಷಕರ ವಿರೋಧದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಮಕ್ಕಳ ಹಕ್ಕು ಆಯೋಗ ಸರ್ಕಾರಕ್ಕೆ ನೀಡಿದ್ದ ಶಿಫಾರಸು ಅದೇಶ ಹಿಂಪಡೆದಿದೆ.

ಶಾಲೆಗಳನ್ನ ಪ್ರಾರಂಭಿಸುವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ.

ಆದರೆ ಶಾಲೆ ಪ್ರಾರಂಭಿಸುವ ಮುನ್ನ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕೆಲ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಶಿಫಾರಸು ‌ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಲೆ ಆರಂಭದ ಕುರಿತಂತೆ ಎಲ್ಲಾ ಪ್ರತಿಪಕ್ಷಗಳ ಮುಖಂಡರ ಹಾಗೂ ತಜ್ಞರ ಜೊತೆ ಚರ್ಚಿಸಿದ ಬಳಿಕವೇ ಸೂಕ್ತ ನಿರ್ಧಾರಕ್ಕೆ ಬರುವ ಭರವಸೆಯನ್ನು ನೀಡುವ ಮೂಲಕ ಶಾಲೆ ಆರಂಭದ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Facebook Comments

comments