Connect with us

    LATEST NEWS

    ದರೋಡೆಯ ಸುಳ್ಳು ಕಥೆ ಕಟ್ಟಿದಾತನ ಬಂಧನ

    ದರೋಡೆಯ ಸುಳ್ಳು ಕಥೆ ಕಟ್ಟಿದಾತನ ಬಂಧನ

    ಮಂಗಳೂರು ಮಾರ್ಚ್ 26: ದರೋಡೆ ಮತ್ತು ಕಳವು ಪ್ರಕರಣದ ಸುಳ್ಳು ಕಥೆ ಸೃಷ್ಟಿಸಿದ್ದಾತನನ್ನು ಮಂಗಳೂರು ರೌಡಿ ನಿಗ್ರಹದಳ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಕಿನ್ಯ ಕನಕಮುಗೇರು ನಿವಾಸಿ ಹರೀಶ್ ಆಚಾರಿ ಎಂದು ಗುರುತಿಸಲಾಗಿದೆ. ಮಂಗಳೂರು ರೌಡಿ ನಿಗ್ರಹದಳ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರಿನ ಕೆ.ಸಿ. ರೋಡ್ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ತೊಕ್ಕೊಟ್ಟಿನ ಹಾಜಿ ಗೊಲ್ಡ್ ಆ್ಯಂಡ್ ಡೈಮಂಡ್ಸ್ ಗೆ ನೀಡಬೇಕಾಗಿದ್ದ ಸುಮಾರು 54 ಗ್ರಾಂ ಚಿನ್ನವನ್ನು ದುಷ್ಕರ್ಮಿಗಳು ಕಣ್ಣಿಗೆ ಮೆಣಸಿನ ಹುಡಿ ಎರಚಿ ಎಗರಿಸಿದ್ದಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದ ಅಲ್ಲದೆ ತನ್ನ ಮನೆಯಿಂದಲೂ 10 ಸಾವಿರೂ ರೂಪಾಯಿ ಮೌಲ್ಯದ ಕಳ್ಳತನ ನಡೆದಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
    ಈ ಎರಡು ಪ್ರಕರಣದಲ್ಲಿ ಪೊಲೀಸರಿಗೆ ಸಂಶಯ ಬಂದ ಕಾರಣ ತೀವ್ರ ತನಿಖೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

    ತೊಕ್ಕೊಟ್ಟಿನ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಗೆ ನೀಡಬೇಕಾಗಿದ್ದ ಸುಮಾರು 1,35,000 ಮೌಲ್ಯದ 54 ಗ್ರಾಂ ಚಿನ್ನ ದರೋಡೆ ಮಾಡಿದ್ದಾರೆಂದು ಸುಳ್ಳು ದೂರು ನೀಡಿ ಹಾಜಿ ಗೋಲ್ಡ್ ಗೆ ನೀಡಬೇಕಿದ್ದ ಚಿನ್ನಾಭರಣ ನೀಡದೆ ವಂಚನೆ ಮಾಡಿದ್ದ, ಅಲ್ಲದೆ ನಷ್ಟವನ್ನು ಸರಿದೂಗಿಸಲು ಅತ್ತೆ ಮನೆಯಿಂದ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನ‌ವನ್ನು ಕಳವುಗೈದಿದ್ದ, ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಬಳಿಕ ತಾನೇ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

     

    Share Information
    Advertisement
    Click to comment

    You must be logged in to post a comment Login

    Leave a Reply