LATEST NEWS
ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಬಿತ್ತು ಧರ್ಮದೇಟು
ಉಡುಪಿ ಜನವರಿ 17: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಕುಂದಾಪುರ ಮೂಲದ ನಕಲಿ ಪತ್ರಕರ್ತರಿಗೆ ಉಡುಪಿಯಲ್ಲಿ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ರೆಸಾರ್ಟ್ ಮಾಲೀಕರೊಬ್ಬರಿಗೆ ಕುಂದಾಪುರ ಮೂಲದ ತಂಡವೊಂದು ಕಿರುಕುಳ ನೀಡುತ್ತಿತ್ತು.
ಹಣಕ್ಕಾಗಿ ಪೀಡಿಸುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಕಳೆದ ಒಂದು ತಿಂಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿತ್ತು. ರೆಸಾರ್ಟ್ ಸಿಬ್ಬಂದಿ ನಕಲಿ ಪತ್ರಕರ್ತರನ್ನು ಉಡುಪಿಗೆ ಕರೆಸಿ ಹಣ ನೀಡುವುದಾಗಿ ಹೇಳಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ ಚಳಿ ಬಿಡಿಸಿದ್ದಾರೆ.
ಹಣ ಪಡೆಯಲು ಬಂದ ತಂಡಕ್ಕೆ ರೆಸಾರ್ಟ್ ಸಿಬ್ಬಂದಿಗಳು ಧರ್ಮದೇಟು ನೀಡಿದ ವೀಡಿಯೋ ಲಭ್ಯವಾಗಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಧರ್ಮದೇಟು ನಿಂತಿದೆ. ರೆಸಾರ್ಟ್ ಸಿಬ್ಬಂದಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.