LATEST NEWS
ಶಿವಲಿಂಗಕ್ಕೆ ಕಾಂಡೋಮ್ ಹಾಕುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ಸಾಯೋನಿ ಘೋಷ್ ವಿರುದ್ಧ ಭಾರೀ ಆಕ್ರೋಶ!
ಕೋಲ್ಕತ, ಜನವರಿ 17: ಶಿವಲಿಂಗವನ್ನು ಅವಮಾನಿಸಿರುವ ಬಂಗಾಳಿ ನಟಿ ಸಾಯೋನಿ ಘೋಷ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. 2015ರಲ್ಲಿ ಶಿವಲಿಂಗವನ್ನು ಅವಹೇಳನ ಮಾಡಿದ್ದ ಟ್ವೀಟ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಸಯೋನಿ ವಿರುದ್ಧ ಅಸಂಖ್ಯಾತ ಭಕ್ತರು ಕೆಂಡಾಮಂಡಲರಾಗಿದ್ದಾರೆ. ಅಲ್ಲದೆ, ನಟಿಯ ವಿರುದ್ಧ ದೂರು ಸಹ ದಾಖಲಾಗಿದೆ.
2015ರ ಫೆ. 18ರಂದು ಸಯೋನಿ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಸೀರೆಯುಟ್ಟ ಮಹಿಳೆಯೊಬ್ಬಳು ಹಿಂದು ಧರ್ಮದ ಪಾವಿತ್ರತೆಯ ಸಂಕೇತ ಶಿವಲಿಂಗಕ್ಕೆ ಕಾಂಡೋಮ್ ಹಾಕುತ್ತಿರುವ ಚಿತ್ರವಿತ್ತು. ಟ್ವೀಟ್ ಕುರಿತು ‘ದೇವರುಗಳು ಹೆಚ್ಚು ಉಪಯುಕ್ತವಾಗುತ್ತಿರಲಿಲ್ಲ’ ಎಂಬ ಅಡಿಬರಹ ಬರೆಯಲಾಗಿತ್ತು. ಅದೇ ವರ್ಷ ಫೆ. 17ರ ಮಹಾರಾತ್ರಿಯ ಹಬ್ಬದ ಬೆನ್ನಲ್ಲೇ ಟ್ವೀಟ್ ಮಾಡುವ ಮೂಲಕ ಹಿಂದು ಸಂಸ್ಕೃತಿಯನ್ನು ಹಾಳು ಮಾಡುವ ಪ್ರಯತ್ನ ನಡೆದಿತ್ತು.
https://twitter.com/jitsamar14/status/1350396722753638403
ಸದ್ಯ ಸಯೋನಿ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಿಮ್ಮ ಹೊಲಸು ಮನಸ್ಥಿತಿಗೆ ನಾಚಿಕೆಯಾಗಬೇಕು. ನೀವು ಕೂಡ ಒಬ್ಬ ಹಿಂದು ಅನ್ನುವುದನ್ನು ಮರೆಯಬೇಡಿ. ಶಿವಲಿಂಗ ನಮ್ಮ ಹಿಂದು ಧರ್ಮದ ಪಾವಿತ್ರತೆಯ ಸಂಕೇತವಾಗಿದೆ. ಭಾರತೀಯ ದಂಡ ಸಂಹಿತೆ ಪ್ರಕಾರ ಇದು ಜಾಮೀನು ರಹಿತ ಅಪರಾಧವಾಗಿದೆ. ಪೊಲೀಸರು ಈ ಕೂಡಲೇ ಸಾಯೋನಿ ವಿರುದ್ಧ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಯಾವಾಗ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತೋ ಕ್ಷಮೆಯಾಚಿಸಿರುವ ಸಯೋನಿ ಅದಕ್ಕೂ ಮುನ್ನ ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು ಎಂದು ಉಡಾಫೆ ಉತ್ತರ ನೀಡಿ ಸಮರ್ಥನೆಗೆ ಮುಂದಾದರು. 2010ರಲ್ಲಿ ನಾನು ಟ್ವಿಟರ್ಗೆ ಸೇರಿದೆ. ಅನೇಕ ವರ್ಷಗಳ ಬಳಕೆಯ ಬಳಿಕ ನಾನು ಅದರ ಮೇಲೆ ಆಸಕ್ತಿ ಕಳೆದುಕೊಂಡೆ 2015ರ ಬಳಿಕ ನಾನು ಖಾತೆಯನ್ನು ನಿರ್ವಹಿಸುತ್ತಿರಲಿಲ್ಲ. ಆದರೂ ಖಾತೆ ಹಾಗೇ ಉಳಿದುಕೊಂಡಿತ್ತು. ಹೀಗಿರುವಾಗ ನನ್ನ ಖಾತೆ ಹ್ಯಾಕ್ ಆಗಿದೆ ಪಿಆರ್ ಏಜೆಂಟ್ ಭಾಸ್ಕರ್ ರಾಯ್ ಎಂಬುವರು ತಿಳಿಸಿಕೊಟ್ಟರು.
2017ರವರೆಗೂ ಖಾತೆಯನ್ನು ಮರಳಿ ಪಡೆಯಲು ಆಗಲಿಲ್ಲ. ನಾನು ಏನೇ ಸಂದೇಶ ಕಳುಹಿಸದರು ಅದು 2017ರ ನಂತರ ಮಾಡಲಾಗಿದೆ ಎಂದು ಹೇಳಿದ್ದರು. ಅಲ್ಲದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಮನವಿ ಮಾಡುವುದಾಗಿಯೂ ಎಚ್ಚರಿಸಿ, ವಿವದಾತ್ಮಕ ಪೋಸ್ಟ್ ಅನ್ನು ಟ್ವಿಟರ್ನಿಂದ ತೆಗೆದುಹಾಕಿದ್ದರು.