LATEST NEWS
ಕುಂದಾಪುರದಲ್ಲಿ ನಕಲಿ ಪತ್ರಕರ್ತರ ಬಂಧನ
ಕುಂದಾಪುರದಲ್ಲಿ ನಕಲಿ ಪತ್ರಕರ್ತರ ಬಂಧನ
ಉಡುಪಿ ಎಪ್ರಿಲ್ 13: ಕೋಟೇಶ್ವರದ ಉದ್ಯಮಿಯೋರ್ವರನ್ನು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನಲೆಯಲ್ಲಿ ಪತ್ರಕರ್ತರೆನ್ನಲಾದ ನಾಲ್ವರು ನಕಲಿ ಪತ್ರಕರ್ತರನ್ನು ಕುಂದಾಪುರ ಪೊಲೀಸ್‌ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ಕುಂದಾಪುರದ ಲೋಕೇಶ್, ಧರ್ಮೇಂದ್ರ, ಮಂಜುನಾಥ್ ಎಂದು ಗುರುತಿಸಲಾಗಿದ್ದು, ಅವರನ್ನು ಸದ್ಯ ಪೊಲೀಸ್‌ರು ವಿಚಾರಣೆಗೆ ಒಳಪಡಿಸಿದ್ದು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಆರೋಪಿಗಳು ಕೋಟೇಶ್ವರದ ಬೀಚ್ ರಸ್ತೆಯಲ್ಲಿನ ಎಫ್‌ಎಮ್ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಮಾಲಕ ಫಾರೂಕ್ ಅವರನ್ನು ಬ್ಲಾಕ್ ಮೇಲ್ ಮಾಡಿ ಹಣವನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ. ಮಾಲಕ ಫಾರೂಕ್ ಅವರು ಫ್ಯಾಕ್ಟರಿಯಲ್ಲಿರುವಾಗ ಕಾರಿನಲ್ಲಿ ಈ ಆರೋಪಿಗಳು ನಾವು ಮಾಧ್ಯಮದವರು ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು ಬೆದರಿಸಿ, ಒಂದು ಲಕ್ಷ ನೀಡದಿದ್ದರೆ ಈ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿ ಅವರಿಂಗದ 5 ಸಾವಿರ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಕಂಪೆನಿಯ ಮಾಲಕ ಫಾರೂಕ್ ಅವರು ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರನ್ನು ದಾಖಲಿಸಿದ್ದರು.
ಇದೇ ಆರೋಪಿಗಳು ಈ ಹಿಂದೆಯೂ ಹಣದ ಬೇಡಿಕೆ ಇಟ್ಟು ಬಾರ್ ಒಂದರಲ್ಲಿ ವಿಡಿಯೊ ಕ್ಯಾಮೆರಾ ಹಿಡಿದು ಬಾರ್ ಮಾಲಿಕರೋರ್ವರಿಗೆ ಬೆದರಿಸಿದ ವಿಡಿಯೊ ವಾಟ್ಸಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು. ಸದ್ಯ ಈ ಬಂಧನದಿಂದಾಗಿ ಕುಂದಾಪುರದಲ್ಲಿ ಪತ್ರಕರ್ತರ ಸೋಗಿನಲ್ಲಿ ಖದೀಮರು ನಡೆಸುತ್ತಿರುವ ಇನ್ನಷು ಅಕ್ರಮಗಳು ಬಯಲಿಗೆ ಬರುವ ಸಾಧ್ಯತೆ ಇದ್ದು, ಸಾರ್ವಜನಿಕರು ಈ ಕುರಿತು ಎಚ್ಚರಿಕೆಯಿಂದಿರುವಂತೆ ಉಡುಪಿ ಎಸ್ಪಿ ಲಕ್ಷಣ್ ನಿಂಬರ್ಗಿ ತಿಳಿಸಿದ್ದಾರೆ.
You must be logged in to post a comment Login