LATEST NEWS
ಮಂಗಳೂರಿನಿಂದ ಸೌದಿಗೆ ದೂದು ಪೇಡಾ ಪಾರ್ಸೆಲಿನ ಕರಾಮತ್ತು : ಗಳೆಯನಿಂದ ಬಂತು ಆಪತ್ತು
ಮಂಗಳೂರಿನಿಂದ ಸೌದಿಗೆ ದೂದು ಪೇಡಾ ಪಾರ್ಸೆಲಿನ ಕರಾಮತ್ತು : ಗಳೆಯನಿಂದ ಬಂತು ಆಪತ್ತು
ಸೌದಿಗೆ ತೆರಳುವ ಯುವಕನ ಕೈಯ್ಯಲ್ಲಿ ಪೇಡಾ ಪಾರ್ಸೆಲ್ ಕೊಟ್ಟ ಗೆಳೆಯ..ಸಂಶಯ ಬಂದು ಪೊಟ್ಟಣ ಬಿಚ್ಚಿದಾಗ ಕಂಡುಬಂದದ್ದೇನು ಗೊತ್ತೇ…?
ಮಂಗಳೂರು, ಎಪ್ರಿಲ್ 13: ಇದು ನಡೆದಿದ್ದು ಉತ್ತರ ಭಾರತದಲ್ಲಿ ಅಲ್ಲ. ವಿದೇಶದಲ್ಲಿಯೂ ಅಲ್ಲ. ಕಡಲತೀರ ನಗರಿ ಮಂಗಳೂರಿನಲ್ಲಿ.
ಇಲ್ಲಿನ ಕನ್ನಂಗಾರು ನಿವಾಸಿ ನೂರ್ ಎಂಬ ಯುವಕ ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನೌಕರಿಯಲ್ಲಿದ್ದು ಇತ್ತೀಚೇಗಷ್ಟೇ ಊರಿಗೆ ಬಂದಿದ್ದನು.
ರಜೆ ಮುಗಿಸಿ ಹಿಂತಿರುಗುವಾಗ ಜುಬೈಲ್ ನಲ್ಲಿರುವ ಈತನ ಮಿತ್ರರಾದ ರಾಹಿಲ್, ರಾಝಿಂ ಕರೆ ಮಾಡುತ್ತಾರೆ. ಊರಿನಿಂದ ಬರುವಾಗ ನಮ್ಮದೊಂದು ಪೇಡಾ ಪಾರ್ಸೆಲ್ ಇದೆಯೆಂದೂ ಅದನ್ನು ತೆಗೆದುಕೊಂಡು ಬರುವಂತೆ ಹೇಳುತ್ತಾರೆ.
ಅದರಂತೆ ಮಂಗಳೂರು ನಿವಾಸಿ ತಂದುಕೊಟ್ಟ ಪೇಡಾ ಪಾರ್ಸೆಲ್ ನ್ನು ಬ್ಯಾಗಿನಲ್ಲಿಟ್ಟ ನೂರ್ ಮರುದಿವಸ ವಿಮಾನವನ್ನೇರಲಿದ್ದ.
ಆದರೆ ರಾತ್ರಿ ನೂರ್ ಗೆ ಏನೋ ಅನುಮಾನ ಕಾಡತೊಡಗಿತು.
ಜುಬೈಲ್ ನಲ್ಲಿ ನೂತನ ಕಂಪೆನಿ ಪ್ರಾರಂಭಿಸಿ ಒಂದಿಷ್ಟು ಸಂಪಾದಿಸಿದ ಗೆಳೆಯರು ಊರಿನಿಂದ ಯಾಕೆ ಸಿಹಿತಿಂಡಿ ಪಾರ್ಸೆಲ್ ತರಿಸುತ್ತಾರೆ?
ಬಲವಾದ ಸಂಶಯ ಕಾಡತೊಡಗಿದಾಗ ಗೆಳೆಯನ ಪಾರ್ಸೆಲನ್ನು ತೆರೆದು ನೋಡಿದಾಗ ಪೊಟ್ಟಣ ತುಂಬಾ ಪೇಡಾಗಳೇ ಇದ್ದುವು. ಅದರಲ್ಲೊಂದು ಪೇಡಾವನ್ನು ಬಾಯಿಗಿಟ್ಟಾಗ ನೂರ್ ಬೆಚ್ಚಿ ಬಿದ್ದನು.
ಪೇಡಾದೊಳಗೆ ಕಂಡುಬಂದಿದ್ದು ಟ್ಯಾಬ್ಲೆಟ್ ಆಗಿತ್ತು. ಗೆಳೆಯರು ಆ ಪೇಡಾದೊಳಗೆ ನೀಲ ಬಣ್ಣದ ಡ್ರಗ್ ಟ್ಯಾಬ್ಲೆಟ್(ಮಾದಕ ವಸ್ತು) ಇರಿಸಿ ನೂರ್ ನ ಕೈಗೆ ಕೊಟ್ಟಿದ್ದರು.
ಪವಾಡ ಸದೃಶವೆಂಬಂತೆ ನೂರ್ ವಿಮಾನವನ್ನೇರುವ ಮೊದಲೇ ಪರಿಶೀಲಿಸಿದ್ದರಿಂದ ನೂರ್ ಬಚವಾದನು..
ವಿಮಾನ ನಿಲ್ದಾಣಕ್ಕೆ ತಲುಪಿದ ಗೆಳೆಯರ ಕೈಗೆ ನೂರ್ ಪಾರ್ಸೆಲ್ ಹಸ್ತಾಂತರಿಸಿ ಏನು ಗೊತ್ತಿಲ್ಲದಂತೆ ನಟಿಸಿದನು.
ಗೆಳೆಯರು ಪೊಟ್ಟಣ ತೆರೆದು ನೋಡಿದಾಗ ಪೇಡಾ ಮಾತ್ರ ಇತ್ತು.
ಆದರೆ ಅದರೊಳಗೆ ಟ್ಯಾಬ್ಲೆಟ್ ಇರಲಿಲ್ಲ.
ಮಾತು ಮಾತಾಗಿ ನೂರ್ ಗೆಳೆಯರನ್ನು ತರಾಟೆಗೆ ತೆಗೆದುಕೊಂಡಿದ್ದೇ ವಿವಾದವಾಗತೊಡಗಿತು.
ಇತ್ತ ಊರಿನಲ್ಲಿ ನೂರ್ ಸಹೋದರ ಮಂಗಳೂರಿನ ನಾರ್ಕೊಟಿಕ್ ಸೆಲ್ ಗೆ ದೂರೂ ನೀಡಿದನು.
ಹೆದರಿದ ರಾಹಿಲ್,ರಾಝೀಂ ವಿವಾದ ಮಾಡದಂತೆ ನೂರ್ ಗೆ 10 ಲಕ್ಷ.ರೂ.ನೀಡುವ ಭರವಸೆ ನೀಡುತ್ತಾರೆ.
ಇದಕ್ಕೆ ನೂರ್ ಒಪ್ಪದಾಗ ಮಂಗಳೂರಿನ ಆಸ್ಪತ್ರೆ ಮಾಲಿಕ,ಗುತ್ತಿಗೆದಾರ ಹಾಗೂ ನಕಲಿ ವೈದ್ಯನೋರ್ವ ಪ್ರಕರಣ ಇತ್ಯರ್ಥಕ್ಕೆ ಮಧ್ಯಪ್ರವೇಶಿಸುತ್ತಾರೆ.
ಡೀಲ್ ಕುದುರಿಸಲು ಆರೋಪಿಗಳಿಬ್ಬರೂ ಊರಿಗೆ ಆಗಮಿಸುತ್ತಾರೆ.
ಕನ್ನಂಗಾರಿನ ಮಸೀದಿಯೊಂದರಲ್ಲಿ ಪಂಚಾಯತಿಕೆ...
ವಿದೇಶಕ್ಕೆ ಹೋಗುವ ಯುವಕನ ಕೈಯ್ಯಲ್ಲಿ ಡ್ರಗ್ಸ್ ಕೊಟ್ಟ ಪ್ರಕರಣವನ್ನು ಇತ್ಯರ್ಥ ಮಾಡಿದ್ದು ಮಸೀದಿಯಲ್ಲಿ ಅಂದ್ರೆ ಹುಬ್ಬೇರಿಸಬೇಡಿ.
ಇದು ಸತ್ಯ. ಕನ್ನಂಗಾರಿನ ಮಸೀದಿಯಲ್ಲಿ ನೂರ್ ನ ಸಹೋದರನನ್ನು ಕರೆಯಿಸಿ ಪಂಚಾಯತಿಕೆ ಮಾಡಲಾಗಿ ರೂ.2 ಲಕ್ಷ.ರೂ.ಪರಿಹಾರ ನೀಡಲಾಗುತ್ತದೆ.
ಬಳಿಕ ನಾರ್ಕೊಟಿಕ್ ಸೆಲ್ ಗೆ ನೀಡಿದ ದೂರನ್ನು ಹಿಂಪಡೆಯಲಾಗುತ್ತದೆ.
ಆದರೆ ಆರೋಪಿಗಳು ನೀಡಿದ 2 ಲಕ್ಷ.ರೂ ನೂರ್ ನ ಸಹೋದರ ತೆಗೆಯದೇ ಮಸೀದಿಗೇ ಸಂದಾಯವಾಗುತ್ತದೆ.
ಡೊನೇಶನ್ ರೂಪದಲ್ಲಿ..ಪರಮಾತ್ಮನ ಕೃಪಕಟಾಕ್ಷವೇನೆಂದರೆ ನೂರ್ ಏನಾದರೂ ಆ ಪಾರ್ಸೆಲನ್ನು ಕೊಂಡೊಯ್ದು ಸಿಕ್ಕಿಬಿದ್ದಿದ್ದರೆ ಆತನ ತಲೆ ಉರುಳುತ್ತಿತ್ತು..
ಪವಾಡ ಸದೃಶ ನೂರ್ ಬಚವಾಗಿದ್ದು ಅದ್ಭುತವೇ ಸರಿ.
ಆದರೆ ಕಂಬಿಯೆಣಿಸಬೇಕಾದ ಆರೋಪಿಗಳ ಪರ ವಕಾಲತ್ತು ವಹಿಸುವ ರಾಜಕಾರಣಿಗಳ ಬಗ್ಗೆ, ಮಧ್ಯಸ್ಥಿಕೆ ವಹಿಸುವ ನಾಡಿನ ಸೊಬಗರ ಬಗ್ಗೆ, ಪ್ರಕರಣದ ತನಿಖೆ ನಡೆಸದ ಅಧಿಕಾರಿಗಳ ಬಗ್ಗೆ ಏನನ್ನೋಣ….? ನೀವೇ ಹೇಳಿ.
ಜುಬೈಲ್ ನಲ್ಲಿ exelon ಕಂಪೆನಿ ಸ್ಥಾಪಿಸಿದ ರಾಹಿಲ್ ಮತ್ತು ರಾಝಿಂ ದಿನಬೆಳಗಾಗುವುದರೊಳಗೆ ಜಗತ್ತೇ ತನ್ನ ಮುಷ್ಟಿಯಲ್ಲಿ ಎಂಬಂತೆ ಅಹಂಕಾರದಿಂದ ಬೀಗುತ್ತಿದ್ದರು.
ಇವರ ಐಷಾರಾಮಿ ಬದುಕು ನೋಡಿ ಇಡೀ ಊರೇ ನಿಬ್ಬೆರಗಾಗಿತ್ತು.
ಇವರ ದಂಧೆಯೇನೆಂಬುದು ನೂರ್ ಬಯಲುಮಾಡಿದ್ದೇ ಅಂತಾರಾಷ್ಟ್ರಿಯ ಡ್ರಗ್ ಮಾಫಿಯಾದ ಮುಖವಾಡ ಕಳಚಿ ಬಿದ್ದಿದೆ.
ಸೌದಿಗೆ ತೆರಳುವ ಅಮಾಯಕರ ಕೈಯ್ಯಲ್ಲಿ ಇವರು ಕೊಡುವ ಪೊಟ್ಟಣವೇ ಇವರ ಶ್ರೀಮಂತಿಕೆಯ ಹಿಂದಿನ ರಹಸ್ಯ.
ಹೆಸರಿಗೊಂದು ಕಂಪೆನಿ ಮಾಡಿ ಮಾದಕ ದ್ರವ್ಯ ದಂಧೆ ಮಾಡುವ ಇವರಿಗೆ ಮಂಗಳೂರಿನ ಕೆಲ ಮಂದಿ ಯ ಸಫೋರ್ಟ್ ಬೇರೆ.
ಇನ್ನು ಮುಂದೆ ಗೆಳೆಯರು ಕೊಟ್ಟ ಪಾರ್ಸೆಲ್ ಕೊಂಡೊಯ್ಯುವವರು ಎಚ್ಚರ ವಹಿಸಿ ತಮ್ಮ ಜೇವ ಉಳಿಸಿ..
You must be logged in to post a comment Login