Connect with us

    LATEST NEWS

    ಪಂಪ್ ವೆಲ್ ಪ್ಲೈ ಓವರ್ ಬರ್ತಡೇ ಪಾರ್ಟಿ ವಿಡಿಯೋ

    ಪಂಪ್ ವೆಲ್ ಪ್ಲೈ ಓವರ್ ಬರ್ತಡೇ ಪಾರ್ಟಿ ವಿಡಿಯೋ

    ಮಂಗಳೂರು ಎಪ್ರಿಲ್ 13: ಪಂಪ್ ವೆಲ್ ಪ್ಲೈ ಓವರ್ ತನ್ನ 8ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಂಡಿದೆ. ಮಂಗಳೂರಿನ ಪ್ರಮುಖ ಅತೀ ಮುಖ್ಯವಾದ ಪ್ಲೈಓವರ್ ಇದಾಗಿದ್ದು, ಕಾಮಗಾರಿ ಆರಂಭವಾಗಿ 8 ವರ್ಷ ಮುಗಿದಿದ್ದು, ಪ್ಲೈಓವರ್ ಕೆಲಸ ಕುಂಟುತ್ತಾ ಸಾಗಿದೆ. ಈ ಹಿನ್ನಲೆಯಲ್ಲಿ ಆಕ್ರೋಶಕೊಂಡ ಸ್ಥಳೀಯ ಯುವಕರು ಪ್ಲೈ ಓವರ್ 8 ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಿ ಅದರ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದ್ದು, ವಿದೇಶಗಳಲ್ಲೂ ಟ್ರೆಂಡಿಂಗ್ ಆಗಿದೆ.

    ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಆರಂಭವಾಗಿ ಸುಮಾರು 8 ವರ್ಷಗಳು ಕಳೆದಿವೆ. ಆದರೆ ಇನ್ನೂ ಕೂಡ ಕಾಮಗಾರಿ ಪೂರ್ಣವಾಗಿಲ್ಲ. ಸುಮಾರು 600 ಮೀಟರ್ ಉದ್ದದ ಫ್ಲೈ ಓವರ್ ಇದಾಗಿದ್ದು, ಉಡುಪಿ- ಕಾಸರಗೋಡು ಮಾರ್ಗದ ಪಂಪ್‌ವೆಲ್‌ನಲ್ಲಿ ಈ ಫ್ಲೈ ಓವರ್ ನಿರ್ಮಾಣವಾಗುತ್ತಿದೆ. ನಂತೂರಿನಿಂದ ಬರುವಾಗ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಿಂದ ಇಂಡಿಯಾನ ಆಸ್ಪತ್ರೆ ಮುಂಭಾಗದವರೆಗೆ ಫ್ಲೈ ಓವರ್ ನಿರ್ಮಾಣವಾಗಲಿದೆ.

    ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ಸ್ಥಳ ನೋಡಿದರೆ ಆಶ್ಚರ್ಯ ಪಡಬೇಕಾಗುತ್ತದೆ. ಇಲ್ಲಿ ಯಾವಾಗಲೂ ಒಬ್ಬರು ಅಥವಾ ಮೂರು ಮಂದಿ ಕಾರ್ಮಿಕರು ಕಾಮಗಾರಿಯನ್ನು ನಡೆಸುತ್ತಾ ಇರುತ್ತಾರೆ. ಕೇಂದ್ರ ಸರಕಾರ ಯಾವುದೇ ವಿಶ್ವದಾಖಲೆ ನಿರ್ಮಿಸಲು ಕೆಲವೇ ಕಾರ್ಮಿಕರನ್ನು ಬಳಸಿ ಪ್ಲೈ ಓವರ್ ನಿರ್ಮಾಣಕ್ಕೆ ಇಳಿದಂತಿದೆ ಇಲ್ಲಿಯ ಕಾಮಗಾರಿ.

    ಈ ಹಿನ್ನಲೆಯಲ್ಲಿ ಸ್ಥಳೀಯ ಯುವಕರ ತಂಡವೊಂದು ಕಾಮಗಾರಿಯ ನಿಧಾನಗತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಆಡಳಿತ ವ್ಯವಸ್ಥೆಯನ್ನು ಅಣಕಿಸುವ ಉದ್ದೇಶದಿಂದ ಫ್ಲೈ ಓವರ್‌ನ ಬರ್ತ್ ಡೇ ಆಚರಿಸಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ಕುಣಿದಾಡಿದ್ದಾರೆ. ಅಲ್ಲದೆ ಫ್ಲೈ ಓವರ್ ಪಿಲ್ಲರ್‌ಗಳಿಗೆ ಕೇಕ್ ತಿನ್ನಿಸಿ, ತಾವೂ ತಿಂದು ಬಳಿಕ ಪಿಲ್ಲರ್‌ಗಳನ್ನು ತುಳಿದು ಆಕ್ರೋಶ ಹೊರ ಹಾಕಿದ್ದಾರೆ.

    ದುಬೈನ ಬುರ‍್ಜ್ ಕಲೀಪಾ ಕಟ್ಟಡದ ಸ್ಪೂರ್ತಿಯಿಂದ ಈ ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಎಂದು ಪ್ರಾರಂಭವಾಗುವ ವಿಡಿಯೋದಲ್ಲಿ ಪ್ಲೈ ಓವರ್ ಜೊತೆ ಬರ್ತಡೇ ಪಾರ್ಟಿ ಮಾಡಿಸ ಪ್ಲೈ ಓವರ್ ನಿಂದ ಕೇಕ ಕತ್ತರಿಸಿರುವ ಸಂಭ್ರಮ ಈ ವಿಡಿಯೋದಲ್ಲಿದೆ.

    ಅಲ್ಲದೇ ಅವರ ಈ ಬರ್ತಡೇ ಆಚರಣೆಯ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದು, ಅದನ್ನು ಸುಂದರವಾಗಿ ಎಡಿಟ್ ಮಾಡಿ ಅದಕ್ಕೆ ಸೂಕ್ತವಾದ ಸಂಗೀತವನ್ನು ಜೋಡಿಸಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಈಗ ಜಾಲತಾಣಗಳ ಮೂಲಕ ಎಲ್ಲೆಡೆ ವೈರಲ್ ಆಗಿದ್ದು, ವಿದೇಶದಲ್ಲಿರುವ ಕರಾವಳಿ ಮಂದಿ ಕೂಡಾ ಇದನ್ನು ಶೇರ್ ಮಾಡುತ್ತಿದ್ದಾರೆ. ಈ ಮೂಲಕ ಮಂಗಳೂರಿನ ಕಾಮಗಾರಿಯೊಂದರ ಬಗ್ಗೆ ಜಾಗತಿಕವಾಗಿ ಮಾನ ಹರಾಜು ಆಗುತ್ತಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply