Connect with us

KARNATAKA

ಮಾರ್ಚ್ 15 ರಿಂದ 30 ರವರೆಗೆ ಕಾಲೇಜುಗಳಿಗೆ ರಜೆ ಘೋಷಣೆಯ ನಕಲಿ ಸುತ್ತೋಲೆ ವೈರಲ್

ಬೆಂಗಳೂರು ಮಾರ್ಚ್ 14: ಕಳೆದ ಬಾರಿಯ ಸರಕಾರಿ ಸುತ್ತೊಲೆಗಳನ್ನು ತಿದ್ದಿ ಈ ಮತ್ತೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂದಿನ 15 ದಿನಗಳವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳನ್ನು ಮುಚ್ಚಲಾಗುವುದು ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಇದು ಸಂಪೂರ್ಣ ನಕಲಿಯಾಗಿದೆ ಸರ್ಕಾರದಿಂದ ಅಂತಹ ಯಾವುದೇ ಆದೇಶಗಳನ್ನು ಅಥವಾ ಸುತ್ತೋಲೆಗಳನ್ನು ಹೊರಡಿಸಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗ ಸರ್ಕಾರ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಸುತ್ತೋಲೆ ಆದೇಶ ಹೊರಡಿಸಿತ್ತು. ಅದೇ ಸುತ್ತೋಲೆಯನ್ನು ದಿನಾಂಕಗಳ ಬದಲಾವಣೆ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *