Connect with us

BANTWAL

‘ಬಲೆ ತುಳು ಕಲ್ಪುಗ’ ತುಳು ಲಿಪಿ ಪರೀಕ್ಷೆ ಬರೆದ 72ರ ನಿವೃತ್ತ ಶಿಕ್ಷಕಿ

ಬಂಟ್ವಾಳ, ಮಾರ್ಚ್ 14: ಇತ್ತೀಚಿನ ದಿನಗಳಲ್ಲಿ ತಮ್ಮೂರಿನ ಭಾಷೆ ತುಳು ಲಿಪಿಯನ್ನು ಕಲಿಯುವ ಆಸಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು. 72ರ  ಹರೆಯದ ವೃದ್ಧೆಯೋರ್ವರು ತುಳು ಲಿಪಿಯ ಪರೀಕ್ಷೆ ಬರೆಯುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಳೆದ ನಾಲ್ಕು ಭಾನುವಾರಗಳಲ್ಲಿ ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ವ್ಯಾಯಾಮ ಶಾಲೆಯಲ್ಲಿ ತುಳು ಲಿಪಿ ಉಚಿತ ತರಬೇತಿ ನಡೆದಿದೆ. ತುಳು ಸಾಹಿತ್ಯ ಅಕಾಡೆಮಿ, ಯುವಜನ ವ್ಯಾಯಾಮ ಶಾಲೆ ಭಂಡಾರಬೆಟ್ಟು ಸಹಯೋಗದಲ್ಲಿ ಜೈ ತುಳು ಸಂಘಟನೆ ಇದನ್ನು ನಡೆಸಿಕೊಡುತ್ತಿದೆ.

ಈ ತರಬೇತಿಗೆ ಆಗಮಿಸಿದ ಸುಮಾರು 35 ಆಸಕ್ತರಲ್ಲಿ 30 ಮಂದಿ ಈ ಭಾನುವಾರ ಪರೀಕ್ಷೆಯನ್ನು ಬರೆದಿದ್ದು, ಇವರಲ್ಲಿ 72 ವರ್ಷದ ನಿವೃತ್ತ ಶಿಕ್ಷಕಿ ಎನ್.ಬಿ. ಲಕ್ಷ್ಮೀ ಅವರು ಆಸಕ್ತಿಯಿಂದ ತುಳು ಲಿಪಿ ಬರೆದು ಇತರರ ಗಮನ ಸೆಳೆದರು. ಬಲೆ ತುಳು ಕಲ್ಪುಗ ಎಂಬ ಹೆಸರಿನಲ್ಲಿ ನಾಲ್ಕು ವಾರಗಳ ಕಾಲ ತುಳು ಲಿಪಿ ತರಬೇತಿ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಆನ್ಲೈನ್ ಕ್ಲಾಸ್ ಮೂಲಕ ತರಬೇತಿ ಪಡೆದಿದ್ದ ಲಕ್ಷ್ಮೀ ಅಮ್ಮ, ಇಂದು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *