Connect with us

  LATEST NEWS

  ನಕಲಿ ಎನ್ ಕೌಂಟರ್: ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ ತೀರ್ಪಿತ್ತ ಬಾಂಬೆ ಹೈಕೋರ್ಟ್..!

  ಮುಂಬೈ: ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಬಾಂಬೆ  ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೂರು ವಾರಗಳಲ್ಲಿ ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯದ ಮುಂದೆ ಶರಣಾಗುವಂತೆ ಹೈಕೋರ್ಟ್ ವಿಭಾಗೀಯ ಪೀಠ ಶರ್ಮಾಗೆ ಸೂಚಿಸಿದೆ.

  2006ರಲ್ಲಿ ಮುಂಬೈನಲ್ಲಿ ನಡೆದ ದರೋಡೆಕೋರ ಛೋಟಾ ರಾಜನ್‌ನ ಆಪ್ತ ಸಹಾಯಕ ಎನ್ನಲಾದ ರಾಮ್ನಾರಾಯಣ ಗುಪ್ತಾ ನಕಲಿ ಎನ್‌ಕೌಂಟರ್ ಪ್ರಕರಣ ಇದಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರ ವಿಭಾಗೀಯ ಪೀಠ, ಶರ್ಮಾ ಅವರನ್ನು ಖುಲಾಸೆಗೊಳಿಸಿದ್ದ 2013 ರ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ.

  “ವಿಚಾರಣಾ ನ್ಯಾಯಾಲಯವು ಶರ್ಮಾ ವಿರುದ್ಧ ಲಭ್ಯವಿರುವ ಅಗಾಧ ಸಾಕ್ಷ್ಯಗಳನ್ನು ಕಡೆಗಣಿಸಿದೆ. ಆದರೆ ಸಾಮಾನ್ಯ ಸಾಕ್ಷ್ಯಗಳ ಸರಣಿಯು ಪ್ರಕರಣದಲ್ಲಿ ಶರ್ಮಾ ಭಾಗಿಯಾಗಿರುವುದನ್ನು ತಪ್ಪಾಗಿ ಸಾಬೀತುಪಡಿಸುತ್ತದೆ” ಎಂದು ನ್ಯಾಯಾಲಯ  ಅಭಿಪ್ರಾಯಪಟ್ಟಿತು.

  Share Information
  Advertisement
  Click to comment

  You must be logged in to post a comment Login

  Leave a Reply