ಕಳ್ಳಭಟ್ಟಿ ತಯಾರಿಕಾ ಘಟಕಕ್ಕೆ ದಾಳಿ 500 ಲೀ ನಕಲಿ ವೈನ್ ವಶಕ್ಕೆ

ಬಂಟ್ವಾಳ ಎ.18: ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಕುಮಾರ್ ಮತ್ತು ಕ್ರಿಸ್ಟನ್ ಡಿಸೋಜಾ ಎಂದು ಗುರುತಿಸಲಾಗಿದೆ.

ಆರೋಪಿಗಳು ಬಂಟ್ವಾಳ ತಾಲೂಕಿನ ಅಂಮುಂಜೆ ಗ್ರಾಮದ ಬೆಂಜನಪದವು ಕಳ್ಳಭಟ್ಟಿ ತಯಾರಿಕೆ ನಡೆಸುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 1200 ಲೀಟರ್ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೇಜಿ ಬೆಲ್ಲ ಮತ್ತು 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.