Connect with us

    FILM

    ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥದ ಬಗ್ಗೆ ಸ್ಪಷ್ಟನೇ ನೀಡಿದ ವಿಜಯ್ ದೇವರಕೊಂಡ

    ಹೈದರಾಬಾದ್ ಜನವರಿ 20: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ನಡುವಿನ ಮದುವೆ ವರದಿ ಬಗ್ಗೆ ಇದೀಗ ಈಗ ಸ್ವತಃ ವಿಜಯ್ ದೇವರಕೊಂಡ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದು, ಮಾಧ್ಯಮದವರು ಎರಡು ವರ್ಷಕ್ಕೊಮ್ಮೆ ನನಗೆ ಮದುವೆ ಮಾಡಿಸುತ್ತಾರೆ ಎಂದಿದ್ದಾರೆ.


    ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹಲವು ಸಿನೆಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಇಬ್ಬರ ನಡುವೆ ಪ್ರೆಂಡ್ ಶಿಪ್ ಅಲ್ಲದೆ ಬೆರೆನೋ ಇದೆ ಎಂಬ ಗಾಸಿಫ್ ಹರಿದಾಡುತಿತ್ತು, ಒಟ್ಟಿಗೆ ವಾಸವಿದ್ದಾರೆ, ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಆದರೆ, ಇದನ್ನು ಒಪ್ಪಿಕೊಳ್ಳೋಕೆ ಅವರು ರೆಡಿ ಇಲ್ಲ. ‘ನಾವು ಬೆಸ್ಟ್ ಫ್ರೆಂಡ್ಸ್’ ಎಂದೇ ಹೇಳುತ್ತಾ ಬರುತ್ತಿದ್ದಾರೆ. ‘ಜನವರಿಯಲ್ಲಿ ಇವರ ಎಂಗೇಜ್​ಮೆಂಟ್​ ನಡೆಯಲಿದೆ’ ಎಂದು ವರದಿ ಆಗಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ.

    ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಲೀ, ಮದುವೆ ಆಗಲೀ ಆಗುತ್ತಿಲ್ಲ. ಮಾಧ್ಯಮದವರು ಎರಡು ವರ್ಷಕ್ಕೊಮ್ಮೆ ನನಗೆ ಮದುವೆ ಮಾಡಲು ಬಯಸುತ್ತಾರೆ ಅನಿಸುತ್ತಿದೆ. ಪ್ರತಿ ವರ್ಷ ಈ ವದಂತಿ ಕೇಳುತ್ತೇನೆ. ಅವರು ನನಗೆ ಮದುವೆ ಮಾಡಿಸಲು ಕಾಯುತ್ತಿರುತ್ತಾರೆ’ ಎಂದಿದ್ದಾರೆ ವಿಜಯ್ ದೇವರಕೊಂಡ. ಈ ಮೂಲಕ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply