Connect with us

    LATEST NEWS

    ಖಾಸಗಿ ವಾಹನಗಳಿಗೆ ಮಂಗಳೂರು ನಗರ ಪ್ರವೇಶಕ್ಕೆ ಶುಲ್ಕ – ಜಿಲ್ಲಾಧಿಕಾರಿ

    ಖಾಸಗಿ ವಾಹನಗಳಿಗೆ ಮಂಗಳೂರು ನಗರ ಪ್ರವೇಶಕ್ಕೆ ಶುಲ್ಕ – ಜಿಲ್ಲಾಧಿಕಾರಿ

    ಮಂಗಳೂರು ಫೆಬ್ರವರಿ 6 : ಮಂಗಳೂರಿನಲ್ಲಿ ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗಲು ನಗರದೊಳಗೆ ಖಾಸಗಿ ವಾಹನಗಳಿಗೆ ಇಆರ್‍ಪಿ ( ಇಲೆಕ್ಟ್ರಾನಿಕ್ ರಸ್ತೆ ಶುಲ್ಕ)ಯನ್ನು ಅಳವಡಿಸಲು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

    ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸಲು ಪದೇ ಪದೇ ರಸ್ತೆ ಅಗಲೀಕರಣಗೊಳಿಸುವ ಬದಲು ಖಾಸಗಿ ವಾಹನಗಳು ನಗರದಲ್ಲಿ ಓಡಾಟ ನಡೆಸುವುದನ್ನು ತಪ್ಪಿಸಲು ಇಆರ್‍ಪಿ ವ್ಯವಸ್ಥೆ ಜಾರಿಗೊಳಿಸುವುದು ಅಗತ್ಯವಿದೆ ಎಂದರು. ವಿದೇಶಗಳಲ್ಲಿ ಈ ವ್ಯವಸ್ಥೆ ಚಾಲ್ತಿಯಲ್ಲಿದ್ದು ಇದರ ಮೂಲಕ ನಗರದ ನಿರ್ದಿಷ್ಟ ಪ್ರದೇಶದೊಳಗೆ ಖಾಸಗಿ ವಾಹನಗಳ ಪ್ರವೆಶದ ಸಂದರ್ಭದಲ್ಲಿ ಮಾಲಕರ ಎಟಿಎಂ ಕಾರ್ಡ್‍ನಿಂದ ನಿಗದಿತ ದರ ಕಡಿತಗೊಳ್ಳಲಿದೆ ಎಂದು ತಿಳಿಸಿದರು.

    ಇದರಿಂದ ಸಾರಿಗೆ ವ್ಯವಸ್ಥೆಯು ಯಾವುದೇ ಅಡಚಣೆ ಇಲ್ಲದೇ ಸುಗಮವಾಗಿ ಸಾಗಲು ಸಾಧ್ಯವಿದ್ದು ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಿ ಮಾದರಿ ಜಿಲ್ಲೆಯಾಗಿಸಲು ಪ್ರಯತ್ನ ನಡೆಸಿ ಇದರ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

    ಈ ಸಂದರ್ಭ ಜಿಲ್ಲೆಯಲ್ಲಿನ ಬಸ್ಸುಗಳ ಸಮಸ್ಯೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅಹವಾಲನ್ನು ಸ್ವೀಕರಿಸಿದರು. ಕೇವಲ ಪ್ರಾದೇಶಿಕ ಸಾರಿಗೆಯ ಸಮಸ್ಯೆಯಿದ್ದಲ್ಲಿ ಆರ್‍ಟಿಎ ಸಭೆಗಾಗಿ ಕಾಯದೇ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನೇರವಾಗಿ ತಮ್ಮನ್ನು ಭೇಟಿಯಾಗಲು ತಿಳಿಸಿದರು.

    ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನರ್ಮ್ ಬಸ್ ಸೇವೆಯ ಕುರಿತು ಖಾಸಗಿ ಬಸ್ಸಿನ ಮಾಲಕರು ಕೋರ್ಟ್ ಮೆಟ್ಟಿಲೇರಿದ್ದನ್ನು ಸಾರ್ವಜನಿಕರೊಬ್ಬರು ಪ್ರಸ್ತಾಪಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಾವುದೇ ನ್ಯಾಯಾಲಯಕ್ಕೂ ಹೋದರೂ ತಾವು ಸಾರ್ವಜನಿಕರ ಬೆಂಬಲಕ್ಕೆ ನಿಂತು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯಿತ್ತರು.

    Share Information
    Advertisement
    Click to comment

    You must be logged in to post a comment Login

    Leave a Reply