Connect with us

LATEST NEWS

ಕೊರೊನಾ ಎರಡನೇ ಅಲೆಗೆ ಚುನಾವಣಾ ಆಯೋಗ ನೇರ ಕಾರಣ – ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು…ಮದ್ರಾಸ್ ಹೈಕೋರ್ಟ್

ಚೆನ್ನೈ: ಕೋವಿಡ್-19 ರ ಮಾರಕ ಎರಡನೇ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗಲೂ ರಾಜಕೀಯ ರಾಲಿಗಳಿಗೆ ಅವಕಾಶ ನೀಡಿದ್ದ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಬಲವಾಗಿ ಖಂಡಿಸಿದೆ. ಅಲ್ಲದೆ ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ. ಅದರ ವಿರುದ್ಧ ದೂರು ದಾಖಲಾಗಬೇಕು ಎಂದು ಹೇಳಿದೆ.


ರಾಲಿಗಳಲ್ಲಿ ಕೊರೋನಾ ನಿಯಮ ಪಾಲನೆಯಾಗುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಆಯೋಗ ವಿಫಲವಾಗಿರುವುದನ್ನು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಖಂಡಿಸಿದ್ದಾರೆ. ಅಲ್ಲದೆ ಕೊರೋನಾ ಎರಡನೇ ಅಲೆಗೆ ಚುನಾವಣಾ ಆಯೋಗವೇ ಕಾರಣ ಎಂದಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ನುಡಿದ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಅವರು, ಕೋವಿಡ್ 19 ಹರಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕೀಲರು ಹೇಳಿದಾಗ, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ರಾಜಕೀಯ ರಾಲಿಗಳು ನಡೆಯುತ್ತಿರುವಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.


ಸಾರ್ವಜನಿಕ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಸಾಂವಿಧಾನಿಕ ಅಧಿಕಾರಿಗಳಿಗೆ ನೆನಪು ಮಾಡಿಕೊಡಬೇಕಾಗಿ ಬಂದಿರುವುದು ವಿಷಾದಕರವಾಗಿದೆ. ನಾಗರಿಕರು ಬದುಕಿದ್ದಾಗ ಮಾತ್ರ ಪ್ರಜಾಪ್ರಭುತ್ವ ಗಣರಾಜ್ಯವು ಖಾತರಿಪಡಿಸುವ ಹಕ್ಕುಗಳನ್ನು ಸಂಭ್ರಮಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಹೇಳಿದರು

ಈ ವರ್ಷ ಏಪ್ರಿಲ್ 6ರಂದು ಚುನಾವಣೆ ನಡೆದ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಕೋವಿಡ್ 19 ಮುನ್ನೆಚ್ಚರಿಕೆ ಖಚಿತಪಡಿಸಿಕೊಳ್ಲಲು ಚುನಾವಣಾ ಆಯೋಗವು ಸರಿಯಾದ ಯೋಜನೆಯನ್ನು ಜಾರಿಗೊಳಿಸದಿದ್ದರೆ, ಮೇ 2 ರಂದು ಎಣಿಕೆ ಕಾರ್ಯಕ್ರಮಕ್ಕೆ ತಡೆ ನೀಡುವುದಾಗಿ ಹೈಕೋರ್ಟ್ ಎಚ್ಚರಿಸಿದೆ, “ಈಗ ಪರಿಸ್ಥಿತಿ ಉಳಿವು ಮತ್ತು ರಕ್ಷಣೆಯಾಗಿದೆ. ಉಳಿದದ್ದೆಲ್ಲಾ ಮುಂದೆ ಬರುತ್ತದೆ. ರಾಜ್ಯ ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿ ಏಪ್ರಿಲ್ 30ರೊಳಗೆ ಎಣಿಕೆ ದಿನದಂದು ಕೋವಿಡ್ -19 ಪ್ರೋಟೋಕಾಲ್ ಅನ್ನು ಜಾರಿಗೆ ತರುವ ಯೋಜನೆಯನ್ನು ನೀಡುವಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *