Connect with us

LATEST NEWS

ಕುಂದಾಪುರ – ಆಟೋ ರಿಕ್ಷಾ ಮತ್ತು ಕಾರು ನಡುವೆ ಅಪಘಾತ – ಮಹಿಳೆ ಸಾವು

ಉಡುಪಿ ಎಪ್ರಿಲ್ 26: ಉಡುಪಿ ಜಿಲ್ಲೆಯ ಕುಂದಾಪುರದ ಬಳಿ ಆಟೋ ರಿಕ್ಷಾ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ನಡೆದಿದೆ. ತಮ್ಮ ಸಂಬಂಧಿಕರನ್ನು ನೋಡಲು ಹೋಗುವಾಗ ಸಿದ್ದಾಪುರ ಗ್ರಾಮದ ಹೆನ್ನಾಬೈಲ್ ಬಳಿ ಅಪಘಾತವಾಗಿ ಮಹಿಳೆಯು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.


ಸಿದ್ದಾಪುರದ ಬಳಿ ರಸ್ತೆಯಲ್ಲಿ ಬರುವ ವೇಳೆ ಆಟೋ ರಿಕ್ಷಾದಲ್ಲಿ ತಾಯಿ ಮಗಳು ಬರುತ್ತಿರುವಾಗ ಆಟೋ ರಿಕ್ಷಾ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಆ ವೇಳೆ ರಿಕ್ಷಾದಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.ರಿಕ್ಷಾದಲ್ಲಿ ಇದ್ದ ಮತ್ತೋರ್ವ ಮಹಿಳೆ ಮತ್ತು ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಅಪಘಾತದಿಂದ ಕಾರಿನಲ್ಲಿದ್ದ ತಂದೆ ಮತ್ತು ಮಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿಯಲಾಗಿದೆ. ಗಾಯಗೊಂಡವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.