LATEST NEWS
ದಕ್ಷಿಣಕನ್ನಡ ದಲ್ಲಿ ಈದ್ ಮಿಲಾದ್ ರಜೆ ಮಂಗಳವಾರ – ಯು.ಟಿ ಖಾದರ್

ದಕ್ಷಿಣಕನ್ನಡ ದಲ್ಲಿ ಈದ್ ಮಿಲಾದ್ ರಜೆ ಮಂಗಳವಾರ – ಯು.ಟಿ ಖಾದರ್
ಮಂಗಳೂರು ನವೆಂಬರ್ 18: ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನ ಮೀಲಾದುನ್ನಬಿ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 20 ರಂದು ನಡೆಯಲಿರುವುದರಿಂದ ಅಂದು ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸರಕಾರಿ ರಜೆ ನವೆಂಬರ್ 21 ರಂದು ನಿಗದಿಯಾಗಿದ್ದು, ದಕ್ಷಿಣಕನ್ನಡದಲ್ಲಿ ಈದ ಮಿಲಾದ್ ನವೆಂಬರ್ 20 ಮಂಗಳವಾರ ಆಚರಿಸುವುದರಿಂದ ನವೆಂಬರ್ 21ರ ಸರಕಾರಿ ರಜೆಯನ್ನು ಬದಲಾಯಿಸಿ ನವೆಂಬರ್ 20ರಂದು ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ ದಿನವನ್ನಾಗಿ ಪರಿಗಣಿಸಲು ಹಾಗೂ ನವೆಂಬರ್ 21 ರಂದು ಎಂದಿ ನಂತೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.

ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.