ಪಂಪ್ ವೆಲ್ ಪ್ಲೈಓವರ್ ವಿಳಂಬಕ್ಕೆ ರಾಜ್ಯ ಸರಕಾರ ಕಾರಣ – ನಳಿನ್ ಕುಮಾರ್ ಕಟೀಲ್

ಮಂಗಳೂರು, ನವೆಂಬರ್ 18: ಪಂಪ್ ವೆಲ್ ಮೆಲ್ಸೇತುವೆ ಕಾಮಗಾರಿ ತಡವಾಗಲು ರಾಜ್ಯ ಸರಕಾರವೇ ನೇರ ಕಾರಣ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ. ಇಂದು ಇಂದು ಬೆಳಗ್ಗೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯ ಸರ್ಕಾರ ನಿಗದಿತ ಸಮಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸದ ಕಾರಣ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ತಡವಾಗಿದೆ ಎಂದು ಸಂಸದ ನಳಿನ್ ಕುಮಾರ್ ರಾಜ್ಯ ಸರಕಾರವನ್ನು ದೂರಿದ್ದಾರೆ.

ಮಹಾವೀರ ವೃತ್ತದ ಬೃಹತ್ ಕಲಶ ಸ್ಥಳಾಂತರಕ್ಕೆ ವಿಳಂಬ, ಸರ್ವೀಸ್ ಬಸ್ ನಿಲ್ದಾಣವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿರ್ಮಿಸಲು ಮುಂದಾಗಿರುವುದು ಮೊದಲಾದ ಕಾರಣದಿಂದ 2010ರಲ್ಲಿ ಕೆಲಸ ಆರಂಭಿಸಿದರೂ, ಕೆಲಸಕ್ಕೆ ವೇಗ ಸಿಕ್ಕಿದ್ದು 2016ರಲ್ಲಿ.

ರಾಷ್ಟ್ರೀಯ ಹೆದ್ದಾರಿ ವಿನ್ಯಾಸ ವನ್ನು 15 ವರ್ಷಗಳ ಹಿಂದೆಯೇ ರಚಿಸಲಾಗಿತ್ತು. ಆದರೆ ಪಂಪ್‌ವೆಲ್‌ನಲ್ಲಿ ಬಸ್‌ನಿಲ್ದಾಣ ನಿರ್ಮಾಣ ಹಿನ್ನೆಲೆಯಲ್ಲಿ ಹೆದ್ದಾರಿ ವಿನ್ಯಾಸ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂತು.

ರಾಜ್ಯ ಸರ್ಕಾರ, ಆಗಿನ ಜಿಲ್ಲಾಧಿಕಾರಿಯವರು ಈ ವಿಚಾರವಾಗಿ ನಿಧಾನಗತಿಯಲ್ಲಿ ಕೆಲಸ ಮಾಡಿದ್ದರಿಂದ ಹೆದ್ದಾರಿ ಕಾಮಗಾರಿ ಆರಂಭಿಸಲು ಆಗಿಲ್ಲ. ಈ ನಡುವೆ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆ ಆರ್ಥಿಕ ನಷ್ಟಕ್ಕೆ ಒಳಗಾಯಿತು. ಈ ಎಲ್ಲ ಕಾರಣದಿಂದ ಕಾಮಗಾರಿ ತಡವಾಯಿತು ಎಂದರು.

Facebook Comments

comments