Connect with us

LATEST NEWS

ಯಕ್ಷಗಾನವನ್ನೂ ನೀತಿ ಸಂಹಿತೆಯ ಅಡಿ ತಂದ ಚುನಾವಣಾ ಆಯೋಗ

ಯಕ್ಷಗಾನವನ್ನೂ ನೀತಿ ಸಂಹಿತೆಯ ಅಡಿ ತಂದ ಚುನಾವಣಾ ಆಯೋಗ

ಮಂಗಳೂರು ಎಪ್ರಿಲ್ 4: ರಾಜ್ಯ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯ ಬಿಸಿ ಈಗ ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೂ ತಟ್ಟಿದ್ದು, ಯಕ್ಷಗಾನದಲ್ಲಿ ಯಾವುದೇ ರಾಜಕೀಯ ಪಕ್ಷ, ರಾಜಕೀಯ ಮುಖಂಡರನ್ನು ಟೀಕಿಸುವಂತಿಲ್ಲ ಎಂದು ಚುನಾವಣಾ ಆಯೋಗ ಮೇಳವೊಂದಕ್ಕೆ ನೋಟಿಸ್ ಜಾರಿ ಮಾಡಿದೆ.

ಯಕ್ಷಗಾನ ಪ್ರಸಂಗ ಒಂದರಲ್ಲಿ ವಿದೂಷಕ ಉಚ್ಚರಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯವರ ಇವನರ್ವ ಡೈಲಾಗ್ ಮೇಲೆ ಚುನಾವಣಾ ಆಯೋಗ ಕೆಂಗಣ್ಣು ಬೀರಿದ. ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ ಮಂಗಳೂರಿನಲ್ಲಿ ಇತ್ತೀಚೆಗೆ ಪ್ರದರ್ಶನ ಗೊಂಡ ಯಕ್ಷಗಾನ ಪ್ರಸಂಗ ಒಂದರಲ್ಲಿ ರ ಸಂಭಾಷಣೆ ಸಂಧರ್ಭದಲ್ಲಿ ಇವನರ್ವ ಇವನರ್ವ ಎಂದು ರಾಹುಲ್ ಗಾಂಧಿಯನ್ನು ಅನುಕರಣೆ ಮಾಡಿ ಸಭಿಕರಿಂದ ಚಪ್ಪಅಳೆ ಗಿಟ್ಟಿಸಿಕೊಂಡಿದ್ದರು. ಯಕ್ಷಗಾನ ಪ್ರಸಂಗದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಅವರ ಇವನರ್ವ ಡೈಲಾಗ್ ಹೇಳಿದ್ದ ಯಕ್ಷಗಾನ ಕಲಾವಿದನ ವಿರುದ್ದ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಮೂಡಬಿದ್ರೆ ಚುನಾವಣಾ ಕಚೇರಿ ಯಿಂದ ನೋಟಿಸ್ ನೀಡಿದ್ದು, ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಸೂಚನೆ ನೀಡಿದ್ದಾರೆ.

ಚುನಾವಣಾ ಆಯೋಗದ ಕ್ರಮಕ್ಕೆ ಯಕ್ಷಗಾನ ಕಲಾವಿದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,ಯಕ್ಷಗಾನ ಪ್ರಸಂಗ ಸಂದರ್ಭದಲ್ಲಿ ವಿದೂಷಕ ಬಳಸಿದ “ಇವನರ್ವ” ಪದಕ್ಕೂ ರಾಜಕೀಯಗೂ ಯಾವುದೇ ಸಂಬಂಧ ಇಲ್ಲ. ಯಾರ ಹೆಸರನ್ನು ಇಲ್ಲಿ ಪ್ರಸ್ಥಪಿಸಲಾಗಿಲ್ಲ . ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VIDEO

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *