LATEST NEWS
ಸೋಲಾಪುರ ಬಳಿ ರೈಲ್ವೆ ಹಳಿ ಕಾಮಗಾರಿ – ಕೊಂಕಣ್ ರೈಲ್ವೆಯ ಕೆಲವು ರೈಲುಗಳ ಪಥ ಬದಲು
ಸೋಲಾಪುರ ಬಳಿ ರೈಲ್ವೆ ಹಳಿ ಕಾಮಗಾರಿ – ಕೊಂಕಣ್ ರೈಲ್ವೆಯ ಕೆಲವು ರೈಲುಗಳ ಪಥ ಬದಲು
ಮಂಗಳೂರು ಎಪ್ರಿಲ್ 4: ಸೋಲಾಪುರ ಬಳಿ ಜೋಡಿ ರೈಲು ಹಳಿ ಕಾರ್ಯಾರಂಭ ಕೆಲಸ ಇರುವುದರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
16352 ನಾಗಕೋವಿಲ್ ಜಂ- ಮುಂಬೈ ಸಿಎಸ್ ಎಂಟಿ ಬಾಲಾಜಿ ಎಕ್ಸ್ ಪ್ರೆಸ್ ಎಪ್ರಿಲ್ 5 ಮತ್ತು 8 ರಂದು ಮದುರೈ ಜಂಕ್ಷನ್ – ಈರೋಡ್ ಜಂಕ್ಷನ್ – ಶೋರನೂರು ಜಂಕ್ಷನ್ – ಮಂಗಳೂರು ಜಂಕ್ಷನ್ – ಮಡಗಾಂವ್ ಜಂಕ್ಷನ್ – ರೋಹಾ ಮೂಲಕ ಸಂಚರಿಸಲಿದೆ.
16339 ಮುಂಬೈ ಸಿಎಸ್ ಎಂಟಿ – ನಾಗರಕೋವಿಲ್ ಜಂಕ್ಷನ್ ಎಕ್ಸ್ ಪ್ರೆಸ್ ಎಪ್ರಿಲ್ 6 ಮತ್ತು 8 ರಂದು ರೋಹಾ-ಮಡಗಾಂವ್ ಜಂ- ಮಂಗಳೂರು ಜಂ- ಶೋರನೂರು ಜಂ- ಈರೋಡ್ ಜಂ- ಮದುರೈ ಜಂ ಮೂಲಕ ತೆರಳುವುದು.
16340 ನಾಗರಕೋವಿಲ್ ಜಂ- ಮುಂಬೈ ಸಿಎಸ್ಎಂಟಿ ಎಕ್ಸ್ ಪ್ರೆಸ್ ಎಪ್ರಿಲ್ 6 ಮತ್ತು 9 ರಂದು ಮುದುರೈ ಜಂ-ಈರೋಡ್ ಜಂ- ಶೋರನೂರು ಜಂ – ಮಂಗಳೂರು ಜಂ- ಮಡಗಾಂವ್ ಜಂ – ರೋಹಾ ಮೂಲಕ ಸಂಚರಿಸಲಿದೆ.
16351 ಮುಂಬೈ ಸಿಎಸ್ಎಂಟಿ ನಾಗರಕೋವಿಲ್ ಬಾಲಾಜಿ ಎಕ್ಸ್ ಪ್ರೆಸ್ ಎಪ್ರಿಲ್ 7 ಮತ್ತು 10 ರಂದು ರೋಹಾ – ಮಡಗಾಂವ್ ಜಂ- ಮಂಗಳೂರು ಜಂ- ಶೋರನೂರು ಜಂ- ಈರೋಡ್ ಜಂ- ಮದುರೈ ಜಂ ಮೂಲಕ ತೆರಳುವುದು.
16332 ತಿರುವನಂತಪುರಂ ಸೆಂಟ್ರಲ್ – ಮುಂಬೈ ಸಿಎಸ್ ಟಿಎಂ ಎಕ್ಸ್ ಪ್ರೆಸ್ ಎಪ್ರಿಲ್ 7 ರಂದು ಶೋರನೂರು ಜಂ – ಮಂಗಳೂರು ಜಂ- ಮಡಗಾಂವ್ ಜಂ- ರೋಹಾ ಮೂಲಕ ಹೋಗಲಿದೆ.
16331 ಮುಂಬೈ ಸಿಎಸ್ ಟಿಎಂ ತಿರುವನಂತಪುರಂ ಸೆಂಟ್ರಲ್ ಎಕ್ಸ್ ಪ್ರೇಸ್ ಎಪ್ರಿಲ್ 9 ರಂದು ರೋಹಾ – ಮಡಗಾಂವ್ ಜಂ- ಮಂಗಳೂರು ಜಂ- ಶೋರನೂರು ಜಂ- ಈರೋಡ್ ಜಂ- ಮದುರೈ ಜಂಕ್ಷನ್ ಮೂಲಕ ತೆರಳಲಿದೆ.
You must be logged in to post a comment Login