Connect with us

    LATEST NEWS

    ‘ಇ’ ತ್ಯಾಜ್ಯಕ್ಕೂ ಬಂತು ಭಾರಿ ಡಿಮಾಂಡ್, ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನ ತೆಗೆದ ವಿಜ್ಞಾನಿಗಳು..!

    ಜ್ಯೂರಿಚ್ : ಇದುವರೆಗೆ ಯಾರಿಗೂ ಬೇಡವಾಗಿದ್ದ ಎಲೆಕ್ಟ್ರಾನಿಕ್ ತ್ಯಾಜ್ಯಕ್ಕೂ ಈಗ ಭಾರಿ ಬೇಡಿಕೆ ಬರಲಾರಂಭಿಸಿದೆ, ಕಾರಣ ಈ ತ್ಯಾಜ್ಯ ಇದೀಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ವಿಜ್ಞಾನಿಗಳ ಸಂಶೋಧನೆ ಬೆನ್ನಲ್ಲೇ ಇ ವೇಸ್ಟ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.

    ಇ ವೇಸ್ಟ್ ನಿಂದ ಚಿನ್ನ ತೆಗೆಯುವ ಸುಲಭ ಮಾರ್ಗವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಕೇವಲ 83 ರೂಪಾಯಿ ಖರ್ಚು ಮಾಡಿ, 4,145 ರೂಪಾಯಿ ಲಾಭ ಪಡೆಯಬಹುದಾಗಿದೆ. ಮಾನವ ಈಗ ಎಲೆಕ್ಟ್ರಾನಿಕ್ ಉತ್ಪನ್ನಗಳ ಗುಲಾಮನಾಗಿದ್ದಾನೆ. ಆದ್ರೆ ದಿನ ಬಳಸಿ ಬಿಸಾಡುವ ಈ ಎಲೆಕ್ಟ್ರಾನಿಕ್ ತ್ಯಾಜ್ಯ ಭಾರತ ಸೇರಿದಂತೆ ವಿಶ್ವ ಎಲ್ಲಾ ರಾಷ್ಟ್ರಗಳಿಗೂ ಅತೀ ದೊಡ್ಡ ತಲೆನೋವು ಆಗಿದೆ. ಹಳೇ ಮೊಬೈಲ್, ಕಂಪ್ಯೂಟರ್, ಮತ್ತಿತರ ಉಪಕರಣಗಳ ಮರುಬಳಕೆ ತೀರ ಕಡಿಮೆ. ಹೀಗಾಗಿ ಇ ವೇಸ್ಟ್ ಜಗತ್ತಿಗೆ ಅತೀ ದೊಡ್ಡ ಸವಾಲಾಗಿತ್ತು ಆದ್ರೆ ಈ ಸವಾಲಿಗೆ ಇದೀಗ ವಿಜ್ಞಾನಿಗಳ ಸಂಶೋಧನೆ ಉತ್ತರ ಜೊತಗೆ ಬಂಪರ್ ಲಾಭವನ್ನೂ ತಂದುಕೊಟ್ಟಿದೆ.ಜ್ಯೂರಿಚ್ ಪ್ರೊಫೆಸರ್ ಗಳ ತಂಡ ನಡೆಸಿದ ಸಂಶೋಧನೆಯಲ್ಲಿ ಹಳೇ ಕಂಪ್ಯೂಟರ್‌ಗಳ ಮದರ್‌ಬೋರ್ಡ್‌ನಿಂದ ಬರೋಬ್ಬರಿ 440 ಮಿಲಿಗ್ರಾಂ ಚಿನ್ನ ಶೋಧಿಸಿ ಹೊರತೆಗಿದ್ದಾರೆ.

    ಆದ್ರೆ ಇದಕ್ಕೆ ಮಾಡಿದ ಖರ್ಚು ಮಾತ್ರ ಅತ್ಯಲ್ಪವಾಗಿದೆ. ಇಲ್ಲಿನ ಇಟಿಎಚ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಫೆಯೆಲೆ ಮೆಝೆಂಗಾ ಹಾಗೂ ಅವರ ತಂಡ ಈ ಸಂಶೋಧನೆಯನ್ನು ನಡೆಸಿ ಯಶಸ್ವಿಯಾಗಿದೆ. ಎಲೆಕ್ಟ್ರಾನಿಕ್ ಇ ತ್ಯಾಜ್ಯದಿಂದ ಚಿನ್ನ ಶೋಧಿಸಲು ಮೊದಲು ಮದರ್‍‌ಬೋರ್ಡ್‌ಗಳನ್ನು ಕಂಪ್ಯೂಟರ್‌ನಿಂದ ಹೊರತೆಗೆದಿದ್ದಾರೆ. ಬಳಿಕ ಆ್ಯಸಿಕ್ ಮೂಲಕ ಈ ಮದರ್‌ಬೋರ್ಡ್‌ಗಳನ್ನು ಸ್ವಚ್ಚಗೊಳಿಸಿದ್ದಾರೆ. ಇತ್ತ ಪ್ರೊಟಿನ್ ಸ್ಪಂಜು, ಚೀಸ್ ತಯಾರಿಕೆಯಲ್ಲಿನ ಉಪ ಉತ್ಪನ್ನಗಳನ್ನು ರೆಡಿ ಮಾಡಿದ್ದಾರೆ. ಬಳಿಕ ಇ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿಟ್ಟು ಆಮ್ಲೀಯ ಪರಿಸ್ಥಿತಿಯಲ್ಲಿ ಪ್ರೋಟಿನ್ ಡಿನೇಚರ್ ಮಾಡಲಾಗಿದೆ. ಬಳಿಕ ಪ್ರೋಟಿನ್ ಸ್ಲರಿಯನ್ನು ರಚಿಸಲು ನೆರವಾಗಲು ಪ್ರೊಟಿನ್ ಸ್ಪಂಚುಗಳ ಬಳಸಿದ್ದಾರೆ. ತ್ಯಾಜ್ಯದಲ್ಲಿರುವ ಚಿನ್ನದ ಕಣಗಳನ್ನು ಆಕರ್ಷಿಸಲು ಪ್ರೋಟಿನ್ ಫೈಬರ್ ಸ್ಪಾಂಜ್‌ನ್ನ ದ್ರಾವಣದಲ್ಲಿ ಇರಿಸಿದ್ದಾರೆ. ಈ ವೇಳೆ ಚಿನ್ನದ ಕಣಗಳು ಈ ಪ್ರೋಟಿನ್ ಸ್ಪಂಜಿನಲ್ಲಿ ಅಂಟಿಕೊಳ್ಳಲು ಆರಂಭಿಸಿದೆ. ಈ ಪ್ರಕ್ರಿಯೆ ಬಳಿಕ ಪ್ರೋಟಿನ್ ಸ್ವಾಂಜುಗಳನ್ನು ಬಿಸಿ ಮಾಡಲಾಗಿದೆ. ಈ ವೇಳೆ ಇದರಲ್ಲಿ ಅಂಟಿಕೊಂಡ ಚಿನ್ನದ ಕಣಗಳು ಕರಗಿ ಗಟ್ಟಿಯಾಗಿ ಪರಿವರ್ತಿಸಲಾಗಿದೆ. 20 ಕಂಪ್ಯೂಟರ್‌ಗಳ ಮದರ್‌ಬೋರ್ಡ್‌ನಿಂಜ 450 ಮಿಲಿಗ್ರಾಂ ಚಿನ್ನ ಶೋಧಿಸಿ ತೆಗೆಯಲಾಗಿದೆ. ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಹೊರತೆಗೆದ ಚಿನ್ನದ ಮೌಲ್ಯಕ್ಕೆ ಹೋಲಿಸಿದರೆ, ಈ ಶೋಧನೆಗೆ ಬೇಕಾಗುವ ಖರ್ಚು ಅತೀ ಕಡಿಮೆಯಾಗಿದೆ. ಹೀಗಾಗಿ ಇಡೀ ವಿಶ್ವವೇ ಎದುರಿಸುತ್ತಿರುವ ಎಲೆಕ್ಟ್ರಾನಿಕ್ ತಾಜ್ಯದಿಂದ ಚಿನ್ನ ಶೋಧಿಸಿ ಮತ್ತಷ್ಟು ಆದಾಯಗಳಿಕೆಯ ಮಾರ್ಗವೊಂದು ಪತ್ತೆಯಾಗಿದೆ. ಇದೀಗ ಈ ಸಂಶೋಧನೆ ಬೆನ್ನಲ್ಲೇ ಇದೀಗ ಇ ತ್ಯಾಜ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೆಲ ದೇಶಗಳು ಇ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಾನಾ ಕಸರತ್ತು ನಡೆಸುತ್ತಿದ್ದರು ಆದರೆ ಅತೀ ಹೆಚ್ಚು ಜನ ಸಂಖ್ಯೆ ಮತ್ತು ಬಳಕ ಮಾಡುತ್ತಿರುವ ಭಾರತ, ಚೀನಾ ದೇಶಗಳಿಗೆ ಈ ಸಂಶೋಧನೆ ಖಂಡಿತವಾಗಿಯೂ ಒಂದು ವರವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply