Connect with us

    KARNATAKA

    ದಸರಾ ಹಬ್ಬ : 34 ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಜೋಡಿಸಿದ ರೈಲ್ವೇ ಇಲಾಖೆ..!

    ಹುಬ್ಬಳ್ಳಿ: ದಸರಾ ಹಬ್ಬದ(Dussehra festival)  ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ, ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಲಾಗಿದೆ.

    ಅವುಗಳ ಮಾಹಿತಿ ಈ ಕೆಳಗಿನಂತಿವೆ:

    ಅಕ್ಟೋಬರ್ 4 ರಿಂದ 15 ರವರೆಗೆ ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಎಕ್ಸ್ಪ್ರೆಸ್, ಅಕ್ಟೋಬರ್ 1 ರಿಂದ 12 ರವರೆಗೆ ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ (17302), ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಚಾಮರಾಜನಗರ-ಮೈಸೂರು ಎಕ್ಸ್ಪ್ರೆಸ್ (06233/06234), ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಬಾಗಲಕೋಟ ಬಸವ ಎಕ್ಸ್ಪ್ರೆಸ್ (17307) ಮತ್ತು ಅಕ್ಟೋಬರ್ 3 ರಿಂದ 14 ರವರೆಗೆ ಬಾಗಲಕೋಟ-ಮೈಸೂರು ಬಸವ ಎಕ್ಸ್ಪ್ರೆಸ್ (17308), ಅಕ್ಟೋಬರ್ 1 ರಿಂದ 12 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್ಪ್ರೆಸ್ (16591), ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ಹಂಪಿ ಎಕ್ಸ್ಪ್ರೆಸ್ (16592), ಅಕ್ಟೋಬರ್ 2 ರಿಂದ 13 ರವರೆಗೆ ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ (16535) ಮತ್ತು ಅಕ್ಟೋಬರ್ 3 ರಿಂದ 14 ರವರೆಗೆ ಪಂಢರಪುರ ಗೋಲಗುಂಬಜ್ ಎಕ್ಸ್ಪ್ರೆಸ್ (16536) ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

    ಅಕ್ಟೋಬರ್ 3 ರಿಂದ 12 ರವರೆಗೆ ರೈಲು ಸಂಖ್ಯೆ 16227 ಮೈಸೂರು-ತಾಳಗುಪ್ಪ ಎಕ್ಸ್ಪ್ರೆಸ್ ಮತ್ತು ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್ (16228) ರೈಲುಗಳಿಗೆ ತಲಾ ಎರಡು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

    ಅಕ್ಟೋಬರ್ 4 ರಿಂದ 13 ರವರೆಗೆ ರೈಲು ಸಂಖ್ಯೆ 06543/06544 ಮೈಸೂರು-ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ಸ್ಪೆಷಲ್, ಅಕ್ಟೋಬರ್ 4 ರಿಂದ 13 ರವರೆಗೆ ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್ಪ್ರೆಸ್ (16221), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ತಾಳಗುಪ್ಪ ಕುವೆಂಪು ಎಕ್ಸ್ಪ್ರೆಸ್, ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಅರಸೀಕೆರೆ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06273/06274), ಅಕ್ಟೋಬರ್ 3 ರಿಂದ 12 ರವರೆಗೆ ಕೆಎಸ್ಆರ್ ಬೆಂಗಳೂರು-ಚನ್ನಪಟ್ಟಣ-ಕೆಎಸ್ಆರ್ ಬೆಂಗಳೂರು ಪ್ಯಾಸೆಂಜರ್ (06581/06582), ಅಕ್ಟೋಬರ್ 3 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06213), ಅಕ್ಟೋಬರ್ 5 ರಿಂದ 14 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06214), ಅಕ್ಟೋಬರ್ 3 ರಿಂದ 12 ರವರೆಗೆ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (16225), ಅಕ್ಟೋಬರ್ 5 ರಿಂದ 14 ರವರೆಗೆ ಶಿವಮೊಗ್ಗ ಟೌನ್-ಮೈಸೂರು ಎಕ್ಸ್ಪ್ರೆಸ್ (16226), ಅಕ್ಟೋಬರ್ 3 ರಿಂದ 12 ರವರೆಗೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ಪ್ಯಾಸೆಂಜರ್ (07365), ಅಕ್ಟೋಬರ್ 5 ರಿಂದ 14 ರವರೆಗೆ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (07366), ಅಕ್ಟೋಬರ್ 4 ರಿಂದ 13 ರವರೆಗೆ ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು ಎಕ್ಸ್ಪ್ರೆಸ್ (16239/16240), ಅಕ್ಟೋಬರ್ 1 ರಿಂದ 12 ರವರೆಗೆ ಅರಸೀಕೆರೆ-ಮೈಸೂರು ಪ್ಯಾಸೆಂಜರ್ (06267), ಅಕ್ಟೋಬರ್ 4 ರಿಂದ 15 ರವರೆಗೆ ಮೈಸೂರು-ಅರಸೀಕೆರೆ ಪ್ಯಾಸೆಂಜರ್ (06268), ಅಕ್ಟೋಬರ್ 1 ರಿಂದ 12 ರವರೆಗೆ ಮೈಸೂರು-ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ (06269), ಅಕ್ಟೋಬರ್ 3 ರಿಂದ 14 ರವರೆಗೆ ಎಸ್ಎಂವಿಟಿ ಬೆಂಗಳೂರು-ಮೈಸೂರು (06270), ಅಕ್ಟೋಬರ್ 2 ರಿಂದ 13 ರವರೆಗೆ ಎಸ್ಎಂವಿಟಿ ಬೆಂಗಳೂರು-ಕರೈಕಲ್ ಎಕ್ಸ್ಪ್ರೆಸ್ (16529) ಮತ್ತು ಅಕ್ಟೋಬರ್ 3 ರಿಂದ 14 ರವರೆಗೆ ಕರೈಕಲ್-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲುಗಳಿಗೆ ತಲಾ ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗುತ್ತಿದೆ.

    Plse also Read..

    ರೈಲು ಹತ್ತುವಾಗ ಬಿದ್ದ ಮಹಿಳೆಯ ರಕ್ಷಣೆ ಮಾಡಿದ ಆರ್‌ಪಿಎಫ್‌ನ ಮಹಿಳಾ ಸಿಬ್ಬಂದಿಗೆ, ನಗದು ನೀಡಿ ಗೌರವಿಸಿದ ರೈಲ್ವೇ ಇಲಾಖೆ…!

    Share Information
    Advertisement
    Click to comment

    Leave a Reply

    Your email address will not be published. Required fields are marked *