ಕಂಚಿನಡ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರಿಂದ ವಿರೋಧ

ಬಂಟ್ವಾಳ ಮಾರ್ಚ್ 18: ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕದಲ್ಲಿ ಬಂಟ್ವಾಳ ಪುರಸಭೆ ನಿರ್ಮಿಸಿರುವ ಸುಮಾರು 1.40 ಕೋಟಿ ವೆಚ್ಚದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

 ಮಂಗಳೂರು ಸಹಾಯಕ ಆಯುಕ್ತರ ಆದೇಶದ ಮೇರೆಗೆ ಇಂದು ತ್ಯಾಜ್ಯ ಘಟಕಕ್ಕೆ ತ್ಯಾಜ್ಯ ವಿಲೇವಾರಿಗೆ ಪುರಸಭೆಯ ಸಿಬ್ಬಂದಿಗಳು ತೆರಳಿದ ಸಂದರ್ಭದಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ‌‌.

ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಮನಗಂಡು ಬಂಟ್ವಾಳ  ಪೋಲೀಸರು ಪ್ರತಿಭಟನಾ ನಿರತ ಕೆಲವರನ್ನು ಬಂಧಿಸಿದ್ದಾರೆ. ಪೋಲೀಸ್ ಸರ್ಪಗಾವಲಿನಲ್ಲಿ ಸಿಬ್ಬಂದಿಗಳು ತ್ಯಾಜ್ಯವನ್ನು ವಿಲೇವಾರಿ ಘಟಕಕ್ಕೆ ಹಾಕುವಂತಹ ಸ್ಥಿತಿ ಇಲ್ಲಿ ನಿರ್ಮಾಣಗೊಂಡಿದೆ.